ಜಿಲ್ಲಾಧಿಕಾರಿ ಕಚೇರಿಯೆದುರು ಎಂಡೋ ಪೀಡಿತರಿಂದ ಧರಣಿ

ಎಂಡೋ ಸಲ್ಫಾನ್ ರಿಂದ ನಡೆದ ಧರಣಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವಿವಿಧ ಬೇಡಿಕೆಗಳನ್ನು ಮುಂಡಿಟ್ಟು ಎಂಡೋ ಸಲ್ಫಾನ್ ಪೀಡಿತರು ಜನಕೀಯ ವೇದಿಕೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಿದರು.ಪ್ರತಿಭಟನಾ ಧರಣಿಯಲ್ಲಿ ನೂರಾರು ಮಂದಿ ಭಾಗಿಯಾದರು.

ಸಾಮಾಜಿಕ ಕಾರ್ಯಕರ್ತೆ ಕೆ ಅಜಿತಾ ಧರಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಎಂಡೋ ಸಲ್ಫಾನ್ ಪೀಡಿತರ ಬೇಡಿಕೆಯನ್ನು ಸರಕಾರ ಗೌರವಯುತವಾಗಿ ಪರಿಗಣಿಸಬೇಕಿದೆ.  ವಾಗ್ಡಾನಗಳನ್ನು ನೀಡಿದ ಸರಕಾರ ಅದನ್ನು ನೆರವೇರಿಸಬೇಕಾಗಿದೆ. ಸರಕಾರದ ಭಾಗದಿಂದ ಎಂಡೋ ಸಲ್ಫಾನ್ ಪೀಡಿತರಿಗೆ ಈಗಿನ ಸಂದರ್ಭದಲ್ಲಿ ಅಲ್ಪವಾದರೂ ಸಹಕಾರ ನೀಡಬೇಕಾಗಿದೆ” ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಮಜ ಸೇವಕರು ಹಾಗೂ ಜನಪ್ರತಿನಿಧಿಗಳು ಉಪಸ್ಥರಿದ್ದರು.