ಎಂಡೋಸಲ್ಫಾನ್ ಸಂತ್ರಸ್ತೆ ಮೃತ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಕಷ್ಟ ಎದುರಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಪಡ್ರೆ ಪಳ್ಳತ್ತುಮೂಲೆ ನಿವಾಸಿ ನಾರಾಯಣ ಭಟ್ ಪುತ್ರಿ ರಮಾಮಣಿ (60) ಮೃತ ದುರ್ದೈವಿ. ಜನ್ಮತಃ ಮೂಖಿಯಾಗಿದ್ದು, ಇವರ ಶರೀರ ಬೆಳವಣಿಗೆಯಾಗಿರÀಲಿಲ್ಲ. ಪರಿಯಾರಂ ವೈದ್ಯಕೀಯ ಕಾಲೇಜು ಸಹಿತ ವಿವಿಧೆಡೆಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಎಣ್ಮಕಜೆ ಗ್ರಾ ಪಂ.ನ 8ನೇ ವಾರ್ಡ್ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಇವರ ಹೆಸರು ಒಳಪಡಿಸಲಾಗಿತ್ತು. ಇದೀಗ ಮನೆಯಲ್ಲಿ ಅಸೌಖ್ಯ ಉಲ್ಭಣಗೊಂಡು ಇವರು ಮೃತಪಟ್ಟಿದ್ದಾರೆ.