ಎಂಡೋ ಸಂತ್ರಸ್ತೆ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಅಸೌಖ್ಯ ಬಾಧಿಸಿ ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ.

ಪಡ್ರೆ ಬಳೆಗಾರಮೂಲೆ ನಿವಾಸಿ ದಿ ಶಂಕರ ರೈ ಎಂಬವರ ಪುತ್ರಿ ಶೀಲಾವತಿ ಮೃತಪಟ್ಟವಳು. ಶೀಲಾವತಿಗೆ ಚಿಕ್ಕಂದಿನಿಂದಲೇ ಅಸೌಖ್ಯ ಬಾಧಿಸಿತ್ತು. ಕೈ-ಕಾಲುಗಳು ಸಪೂರವಾಗಿದ್ದು, ನಡೆದಾಡಲಾಗದ ಸ್ಥಿತಿಯಲ್ಲಿದ್ದರು. 7 ವರ್ಷದಿಂದ ಇವರ ಅಸೌಖ್ಯ ತೀವ್ರಗೊಂಡಿತ್ತು. ಮಂಗಳೂರು, ಪರಿಯಾರಂ ಮೊದಲಾದೆಡೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದರೂ ಗುಣಪಡಿಸಲಾಗಲಿಲ್ಲ. ಎಣ್ಮಕಜೆ ಪಂಚಾಯತಿ 7ನೇ ವಾರ್ಡ್ ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಶೀಲಾವತಿಯ ಹೆಸರು ಸೇರ್ಪಡೆಗೊಳಿಸಲಾಗಿದೆ. ಸೋಮವಾರ ಬೆಳಿಗ್ಗೆ ಮನೆಯಲ್ಲಿ ಅಸೌಖ್ಯ ಉಲ್ಭಣಗೊಂಡು ಶೀಲಾವತಿ ಮೃತಪಟ್ಟರು. ಶೀಲಾವತಿಯ ನಿಧನದಿಂದ ಇವರ ತಾಯಿ ದೇವಕಿ ಹೆಂಗ್ಸು ಏಕಾಂಗಿಯಾಗುವಂತಾಗಿದೆ.

 

 

LEAVE A REPLY