ಮಂಜೇಶ್ವರ ಪಂ.ನಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗೆ ಚಾಲನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ತಾಂತ್ರಿಕ ವಿದ್ಯೆಯುಳ್ಳ ನಿರುದ್ಯೋಗಿಗಳಿಗೆ ಎರಡರಿಂದ ಐದರ ತನಕದ ಸದಸ್ಯರಿರುವ ಕಿರು ಸಂಸ್ಥೆಯೊಂದನ್ನು ಆಯೋಜಿಸಿ ಹಣಕಾಸು ಸ್ಥಾಪನೆಯ ಮುಖಾಂತರ ಸಾಲ ನೀಡಿ ಸ್ವಂತ ಉದ್ಯೋಗ ಕ್ಲಬ್ಬುಗಳನ್ನು ರೂಪೀಕರಿಸಿ ಸ್ವಯಂ ಉದ್ಯೋಗ ಸೃಷ್ಟಿಸುವ ನ್ಯಾಶನಲ್ ಎಂಪೆÇ್ಲೀಯೀಸ್ ಸರ್ವೀಸ್ ಕೇರಳ ಮಲ್ಟಿಪರ್ಪಸ್ ಸರ್ವೀಸ್ ಸೆಂಟರ್ಸ್ ಹಾಗೂ ಜೋಬ್ ಕ್ಲಬ್ ಹಾಗೂ ಮಂಜೇಶ್ವರ ಬ್ಲಾಕ್ ಪಂ.ನ ಸಹಯೋಗದೊಂದಿಗೆ ನಿರುದ್ಯೋಗ ವನ್ನು ನಿವಾರಿಸಲು ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಮಂಜೇಶ್ವರ ಪಂ.ನಲ್ಲಿ ಮಾಹಿತಿ ಶಿಬಿರ ನಡೆಯಿತು. ಶಿಬಿರವನ್ನು ಮಂಜೇಶ್ವರ ಪಂ ಅಧ್ಯಕ್ಷ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಈ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಬೇಕು, ಉದ್ಯೋಗವಿಲ್ಲದೆ ತಿರುಗಾಡುತ್ತಿರುವರಿಗೆ ಸರಕಾರದ ಈ ಉತ್ತಮವಾದ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಉದ್ಯೋಗ ವಿನಿಮಯ ಕಚೇರಿಗಳಿಂದ ಸರಕಾರಿ ರಜೆ ಹೊರತಾದ ಎಲ್ಲಾ ದಿವಸಗಳಲ್ಲೂ ಉಚಿತವಾಗಿ ಲಭಿಸುವ ಅರ್ಜಿಯನ್ನು ಪೂರ್ತೀಕರಿಸಿ ಈ ಯೋಜನೆಯಲ್ಲಿ ಭಾಗಿಯಾಗಬೇಕು” ಎಂದರು.