ಉದ್ಯೋಗ ಖಾತರಿ ಕಾರ್ಮಿಕರ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ರಾಷ್ಟ್ರೀಯ ಉದ್ಯೋಗ ಖಾತರೀ ಯೋಜನೆಯ ವರ್ಕರ್ಸ್ ಯೂನಿಯನ್ ಮೀಂಜ ಪಂಚಾಯತಿ ಸಮಿತಿಯ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕೂಲಿ ಕಾರ್ಮಿಕರಿಗೆ ಬಾಕಿ ಇರುವ ಕೂಲಿಯನ್ನು ಕೂಡಲೇ ವಿತರಿಸಿರಿ, ಕಾರ್ಮಿಕರನ್ನು  ಸಂರಕ್ಷಿಸಿರಿ ಎಂಬಿತ್ಯಾದಿ ಬೇಡಿಕೆಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಿ ಐ ಟಿ ಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿದರು.