ನೌಕರರು ಬ್ಯಾಂಕ್, ಎಟಿಎಂನಲ್ಲಿ ಸಂಬಳ ಪಡೆಯಲು ಸಹನೆ ಅಗತ್ಯ

ರೂಪಾಯಿ ಐದುನೂರು ಮತ್ತು ಒಂದು ಸಾವಿರ ನೋಟುಗಳನ್ನು ರದ್ದು ಮಾಡಿದ ನಂತರ ಜನಸಾಮಾನ್ಯರಿಗೆ ಸ್ವಲ್ಪಮಟ್ಟಿನ ತೊಂದರೆಯಾಗಿರುವುದು ಸಹಜ. ಇನ್ನೀಗ ಡಿಸೆಂಬರಿನಲ್ಲಿ ಹಣಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಕಾರಣ ಉದ್ಯೋಗಿಗಳು ತಮ್ಮ ತಿಂಗಳ ಸಂಬಳದ ಹಣವನ್ನು ಡ್ರಾ ಮಾಡುತ್ತಾರೆ. ಸ್ವಾಭಾವಿಕವಾಗಿ ಎಟಿಎಂ ಮತ್ತು ಬ್ಯಾಂಕಿನಲ್ಲಿ ಹೆಚ್ಚಿನ ನೂಕು ನುಗ್ಗಲು ಇರುತ್ತದೆ. ರಿಸರ್ವ್‍ಬ್ಯಾಂಕ್ ಮತ್ತು ಕೇಂದ್ರ ಸರಕಾರಕ್ಕೆ ಈಗ ಒಂದು ರೀತಿಯ ಅಗ್ನಿಪರೀಕ್ಷೆ. ಜನರ ಹಣದ ಬೇಡಿಕೆ ಈಡೇರಿಸಲು ಸೂಕ್ತ ಕ್ರಮವನ್ನು ಖಂಡಿತಾ ತೆಗೆದುಕೊಳ್ಳಬೇಕಾಗುತ್ತದೆ. ಜನಸಾಮಾನ್ಯರಿಗೆ ತೊಂದರೆ ಆಗುವುದನ್ನು ತಳ್ಳಿ ಹಾಕುವಂತಿಲ್ಲ. ಜನರು ಹೆಚ್ಚಿನ ಸಹನೆ ಪ್ರದರ್ಶಿಸಬೇಕಾಗುತ್ತದೆ. ದೇಶದ ಶಕ್ತಿ ಜನರ ಶಕ್ತಿ.

  • ಕೆ ವಿ ಸೀತಾರಾಮ್, ಮಂಗಳೂರು