ಆಗುಂಬೆ ಘಾಟಿಯಲ್ಲಿ ಸಿಮೆಂಟ್ ಲಾರಿ ಪಲ್ಟಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಹರಿಹರಪುರದಿಂದ ಉಡುಪಿಗೆ ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಘಟನೆ ಹೆಬ್ರಿ ಸಮೀಪದ ಆಗುಂಬೆ ಘಾಟಿಯಲ್ಲಿ ನಡೆದಿದೆ.

ಬುಧವಾರ ಲಾರಿ ಚಾಲಕ ಸಯ್ಯದ್ ಮುನ್ನ ಎಂಬಾತ ಸಿಮೆಂಟ್ ತುಂಬಿದ್ದ ಲಾರಿಯನ್ನು ಚಲಾಯಿಸಿಕೊಂಡು ಆಗುಂಗೆ ಘಾಟಿಯಲ್ಲಿ ಹೆಬ್ರಿ ಕಡೆಗೆ ಬರುತ್ತಿದ್ದಾಗ 4ನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸಯ್ಯದ್ ಮುನ್ನಗೆ ಗಾಯಗಳಾಗಿವೆ. ಲಾರಿಯಲ್ಲಿದ್ದ ಸಿಮೆಂಟ್ ಚೀಲಗಳು ಚೆಲ್ಲಾಪಿಲ್ಲಿಯಾಗಿದೆ.

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.