ಕಟ್ಟದಮೂಲೆಯ ತೋಡಿಗೆ ತಡೆಗೋಡೆ ನಿರ್ಮಾಣ

ಕಟ್ಟದಮೂಲೆಯ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎಣ್ಮಕಜೆ ಗ್ರಾಮ ಪಂಚಾಯತಿ ಹಸಿರು ಕೇರಳ ಯೋಜನೆಯ ಅಂಗವಾಗಿ ಕಟ್ಟದಮೂಲೆಯ ತೋಡಿಗೆ ತಡೆಗೋಡೆ ನಿರ್ಮಾಣದ ಕೆಲಸ ಪ್ರಾರಂಭಿಸಲಾಯಿತು.

ಉದ್ಯೋಗ ಖಾತರಿ ಯೋಜನೆಯಲ್ಲಿ ಅಳವಡಿಸಿ ಕೈಗೊಂಡ ಈ ಕೆಲಸವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪವಾಣಿ ಉದ್ಘಾಟಿಸಿದರು. ಹಸಿರು ಕೇರಳ ಯೋಜನೆಯ ಅಂಗವಾಗಿ ನೀರಿನ ಲಭ್ಯತೆಗೆ ಪಂಚಾಯತಿನ 11 ಸ್ಥಳಗಳಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಅಳವಡಿಸಿಕೊಂಡು ತಡೆಗೋಡೆ ನಿರ್ಮಾಣ ಪ್ರಾರಂಭಿಸಿರುವುದಾಗಿ ಪಂಚಾಯತ್ ಅಧಿಕಾರಿಗಳು ತಿಳಿಸಿದರು.