ಉಡುಪಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಂಗಳವಾರ ಮೆಸ್ಕಾಂ ತುರ್ತು ಕೆಲಸ ನಿರ್ವಹಿಸಲಿರುವುದರಿಂದ ಹೆಚ್ಚಿನ ಎಲ್ಲಾ ಭಾಗಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಜಿಲ್ಲೆಯ ತಳ್ಳೂರು, ಬೈಂದೂರು ಮತ್ತು ಗಂಗೊಳ್ಳಿ ಉಪಕೇಂದ್ರಗಳು ಸೇರಿದಂತೆ ವಂಡ್ಸೆ, ಗಂಗೊಳ್ಳಿ, ಶಿರೂರು, ಉಪ್ಪುಂದ, ಕೊಲ್ಲೂರು, ತಳ್ಳೂರು, ಬೈಂದೂರು, ನಾವುಂದ, ಮರವಂತೆ, ಹೆಮ್ಮಾಡಿ, ಹಟ್ಟಿಯಂಗಡಿ, ಕಂಬದಕೋಣೆ, ಬಸ್ರೂರು, ಕೋಟ, ಸಾಲಿಗ್ರಾಮ, ಸಸ್ತಾನ, ಬಾರ್ಕೂರು, ಕೊರ್ಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕಾರ್ಕಳದ ಬೆಳ್ಮಣ್ ಉಪಕೇಂದ್ರದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇಲ್ಲಿನ ಮಾವಿನಕಟ್ಟೆ, ನಂದಳಿಕೆ, ಕೆಡಿಂಜೆ, ಬೆಳ್ಮಣ್, ಸೂಡಾ, ಸಂತೂರುಕೊಪ್ಲ, ಕೊಡಿಮಾರು, ಇಟ್ಟಮೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆ 11 ಗಂಟೆಯಿಂದ 2 ಗಂಟೆಯವರೆಗೆ ಮಣಿಪಾಲ, ಹಿರಿಯಡ್ಕ, ಪರ್ಕಳ, ಅಜೆಕಾರು, ಶಿವಪುರ ಹೆಬ್ರಿ ಮತ್ತು ಮಂದಾರ್ತಿಯಲ್ಲಿ  ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.  ಹೆಬ್ರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಉದ್ಯಾವರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ. ಆ ಪ್ರದೇಶಗಳೆಂದರೆ ಕುಕ್ಕಿಕಟ್ಟೆ, ಬೈಲೂರು, ಕೊರಂಗ್ರಪಾಡಿ, ಉದ್ಯಾವರ, ಕಟಪಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.  ಬೈಲೂರು ಫೀಡರ್ ವ್ಯಾಪ್ತಿಯ ಹಾಲಾಡಿ, ಬಿಡಲ್ಕಟ್ಟೆ, ಶಂಕರನಾರಾಯಣ, ಅಮಾಸೆಬೈಲು, ಸಿದ್ದಾಪುರ, ಉಳ್ಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.