ಕಂಬದಲ್ಲಿ ವಿದ್ಯುತ್ ಕಾರ್ಮಿಕ ಮೃತ

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ : ವಿದ್ಯುತ್ ಕಂಬಕ್ಕೇರಿದ ಗುತ್ತಿಗೆದಾರರೊಬ್ಬರ ಎಲೆಕ್ಟ್ರೀಶಿಯನ್ ಕಾರ್ಮಿಕನೊಬ್ಬ ವಿದ್ಯುತ್ ಆಘಾತಗೊಂಡು ಕಂಬದಲ್ಲಿ ಸಾವಿಗೀಡಾದ ಮನ ಮಿಡಿಯುವ ಘಟನೆ ಹುಬ್ಬಳ್ಳಿಯಲ್ಲಿ ನಿನ್ನೆ ನಡೆದಿದೆ. ಹಾವೇರಿ ಜಿಲ್ಲೆಯ ಚಾಖಪುರದ ನಿವಾಸಿ ಶಂಕರಗೌಡ ಪಾಟೀಲ್(26) ಮೃತ ವ್ಯಕ್ತಿಯಾಗಿದ್ದಾರೆ. ಇವರು ಕಾರವಾರ ರಸ್ತೆಯ ಬಾಸೆಲ್ ಮಿಶನ್ ಇಂಗ್ಲಿಷ್ ಶಾಲೆಯ ಬಳಿ ಕಂಬದಲ್ಲಿ ವಿದ್ಯುತ್ ತಂತಿಗಳ ಬದಲಾವಣೆ ಕೆಲಸದಲ್ಲಿ ತೊಡಗಿದ್ದಾಗ ತಂತಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಹರಿದು ಸಾವಿಗೀಡಾಗಿದ್ದಾರೆ. ಪೊಲೀಸ್ ಮತ್ತು ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು, ಶವವನ್ನು ಕಂಬದಿಂದ ಕೆಳಕ್ಕಿಳಿಸುವಲ್ಲಿ ನೆರವಾಗಿದ್ದಾರೆ.