ನಿಗದಿತ ಅವಧಿಗೆ ಮುಂಚೆ ರಾಜೀನಾಮೆ ಕೊಟ್ಟವರಿಗೆ ಐದು ವರ್ಷ ಚುನಾವಣೆ ಸ್ಪರ್ಧಿಸದಂತೆ ನಿರ್ಬಂಧಿಸಿ

ನಮ್ಮ ರಾಜಕಾರಣಿಗಳಿಗೆ ಪಕ್ಷ ಬದಲಿಸುವುದೆಂದರೆ ಬಟ್ಟೆ ಬದಲಿಸುವುದಕ್ಕಿಂತ ಸುಲಭ  ಇವರಿಗೆ ಯಾವುದೇ ರೀತಿಯ ನೀತಿ ಅಥವಾ ನೈತಿಕತೆ ಇರುವುದಿಲ್ಲ  ಸದ್ಯ ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ನಂಜನಗೂಡು ಅಸೆಂಬ್ಲಿ ಕ್ಷೇತ್ರಕ್ಕೆ ಮರು ಚುನಾವಣೆ ಎದುರಾಗಿದೆ  ಆದರೆ ಅವರು ಮರುಚುನಾವಣೆಗೆ ನಿಲ್ಲುವ ನಿರ್ಧಾರ ಅವರನ್ನು ಹಿಂದೆ ಚುನಾಯಿಸಿದ ಮತದಾರರಿಗೆ ಮಾಡುವ ಅಗೌರವವೇ ಸರಿ  ಮರುಚುನಾವಣೆಗೆ ಮಾಡುವ ಖರ್ಚು ಸಾರ್ವಜನಿಕರ ಹಣವಲ್ಲವೇ   ಈ ರೀತಿ ಅನವಶ್ಯಕ ಮಧ್ಯಂತರ ಚುನಾವಣೆಗೆ ಎಡೆ ಮಾಡಿಕೊಡುವ ಸದಸ್ಯರಿಂದಲೇ ಖರ್ಚಿನ ಹಣ ಪಡೆಯುವಂಥ ಕಾನೂನು ಜಾರಿಯಾಗಲಿ  ಅವಧಿಗೆ ಮುಂಚೆ ರಾಜೀನಾಮೆ ಕೊಟ್ಟವರು ಕನಿಷ್ಠ ಐದು ವರ್ಷ ಯಾವುದೇ ಚುನಾವಣೆ ಸ್ಪರ್ಧಿಸದಂತೆ ನಿಯಮ ರೂಪಿಸುವುದು ಅತ್ಯವಶ್ಯ

  • ಎಂ ಮನೋಹರ ಸಾಲ್ಯಾನ್  ಕುದ್ರೋಳಿ