ಜನಪ್ರತಿನಿಧಿಗಳು ಒಳಿತಿಗಿಂತ ಕೆಟ್ಟದಕ್ಕೆ ಮಾದರಿಯಾಗುತ್ತಿರುವುದು ದುರಂತ

ಇತ್ತೀಚೆಗೆ ಕೆಲ ಜನಪ್ರತಿನಿಧಿಗಳು ಪೊಲೀಸರ ಮೇಲೆ  ವೈದ್ಯರ ಮೇಲೆ ಅಷ್ಟೇ ಅಲ್ಲದೆ  ಜನಸಾಮಾನ್ಯರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಕಾನೂನುಗಳನ್ನು ಗಾಳಿಗೆ ತೂರುತ್ತಿರುವುದು ದೊಡ್ಡ ದುರಂತ  ಶಾಸನ ರೂಪಿಸುವ ಈ ಮಂದಿ ಇಡೀ ಸಮಾಜಕ್ಕೆ ಮಾರ್ಗದರ್ಶಿಗಳಾಗಬೇಕು ಆದರೆ ಒಳಿತಿಗಿಂತ ಕೆಟ್ಟದ್ದಕ್ಕೆ ಮಾದರಿಯಾಗುತ್ತಿರುವುದು ಆತಂಕಕಾರಿ
ಜನಪ್ರತಿನಿಧಿಗಳು ರಾಜಕೀಯವಾಗಿ ಹಲವಾರು ತಪ್ಪುಗಳನ್ನು ಮಾಡಿದಾಗ ಜನಸಾಮಾನ್ಯರು ಕಾನೂನನ್ನು ಕೈಗೆತ್ತಿಕೊಂಡರೆ ಆಗುತ್ತದೆಯೇ   ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಕ್ರಮಗಳಿರುತ್ತದೆ  ಅದನ್ನು ಬಿಟ್ಟು ಗೂಂಡಾ ವರ್ತನೆ ತೋರಿದರೆ ಜನರು ಇಂಥವರಿಗೆ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುವುದಂತೂ ಖಂಡಿತಾ

  • ಕೆ ವೆಂಕಟೇಶ್ ಶೆಟ್ಟಿ