ವೃದ್ಧೆ ಶವ ಪತ್ತೆ

ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ : ಇಲ್ಲಿನ ಬಸ್ ನಿಲಾಣದಲ್ಲಿ ಸ್ಥಳೀಯ ರೋಟರಿ ಕ್ಲಬ್ಬಿನಿಂದ ನಿರ್ಮಿಸಿಕೊಡಲ್ಪಟ್ಟ ಶಿಶುಗಳಿಗೆ ಹಾಲುಣಿಸುವ ಕೊಠಡಿಯಲ್ಲಿ ವೃದ್ದೆಯೊಬ್ಬರ ಶವ ಮಂಗಳವಾರದಂದು ಪತ್ತೆಯಾಗಿದೆ.

ಮನೆ ಮಂದಿಯೊಂದಿಗೆ ಬೇಸರಗೊಂಡು ಬಂದತ್ತಿರುವ ಈ ಮಹಿಳೆಯು ಕಳೆದ ಕೆಲದಿನಗಳಿಂದ ಇಲ್ಲೇ ಕಾಣಿಸುತ್ತಿದ್ದು, ಆಕೆಯ ಬಳಿ ಇದ್ದ ಪ್ಲಾಸ್ಟಿಕ್ ಚೀಲವೊಂದರಲ್ಲಿ ಔಷಧಿಗಳು, ಎಣ್ಣೆ, ಮೊದಲಾದ ವಸ್ತುಗಳಿದ್ದು, ಒಂದಷ್ಟು ನಗದು ಹಣವೂ ಇತ್ತು.

ಸಭ್ಯ ಮನೆಯ ಮಹಿಳೆಯಂತಿರುವ ಈ ವೃದ್ದೆಯ ಶವವನ್ನು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಯಾರಾದರೂ ವಾರಸುದಾರರು ಕಂಡುಬಂದಲ್ಲಿ ತಕ್ಷಣವೇ ಉಪ್ಪಿನಂಗಡಿ ಪೆÇಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.