ವಯೋವೃದ್ಧೆಗೆ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಮನೆಯಲ್ಲಿದ್ದ ಹಣ ಕಾಣೆಯಾದ ವಿಚಾರದಲ್ಲಿ ನಡೆದ ಜಗಳದಲ್ಲಿ ಮೊಮ್ಮಗನ ಹೆಂಡತಿ ಅಜ್ಜಿಗೆ ಹಲ್ಲೆ ನಡೆಸಿದ್ದಾಳೆ. ಮೂಡುಬೆಳ್ಳೆ ಕುಂತಳ ನಗರದ ಬಾರ್ಚೊಟ್ಟು ಹೌಸ್ ನಿವಾಸಿ ಕಿಟ್ಟಿ ಪೂಜಾರ್ತಿ (89) ಹಲ್ಲೆಗೊಳಗಾದವರು.

ಅಜ್ಜಿ ಮನೆಯಲ್ಲಿಟ್ಟ ಸ್ಥಳದಿಂದ ಹಣ ಕಾಣೆಯಾಗಿದ್ದು, ಈ ಬಗ್ಗೆ ಅಜ್ಜಿ ಮತ್ತು ಮೊಮ್ಮಗನ ಹೆಂಡತಿ ಕೋಕಿಲಾ ಎಂಬವರ ನಡುವೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಸಹನೆ ಕಳೆದುಕೊಂಡ ಮಹಿಳೆ ಅಜ್ಜಿಗೆ ಅವಾಚ್ಯವಾಗಿ ಬೈದು, ಅಲ್ಲೇ ಇದ್ದ ಮರದ ಕೋಲಿನಿಂದ ಅಜ್ಜಿಗೆ ಹೊಡೆದು, ಕಾಲಿನಿಂದ ತುಳಿದು ಗಾಯಗೊಳಿಸಿದ್ದಾಗಿ ಆರೋಪಿಸಿ ಶಿರ್ವ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

 

LEAVE A REPLY