85ರ ವೃದ್ಧ ಬೀದಿ ನಾಯಿಗಳಿಗೆ ಬಲಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವೃದ್ಧರೊಬ್ಬರ ಮೇಲೆ ಬೀದಿನಾಯಿಗಳು ದಾಳಿ ನಡೆಸಿ, ಕೊಂದು ಹಾಕಿದ ಘಟನೆ ಶುಕ್ರವಾರ ರಾತ್ರಿ ಅಟ್ಟಿಂಗಲ್ ಹತ್ತಿರದ ಮಮಂನಲ್ಲಿ ನಡೆದಿದೆ. ನಾಯಿಗಳು ಕುಂಜಿಕೃಷ್ಣನ್ (85) ಎಂಬವರ ದೇಹವನ್ನು ಛಿದ್ರಗೊಳಿಸಿದ್ದಲ್ಲದೇ, ಕೆಲವು ಭಾಗ ತಿಂದು ಹಾಕಿವೆ. ಇವರು ನಾಯಿಗಳ ದಾಳಿಗೆ ಮೃತಪಟ್ಟಿದ್ದಾರೆಂಬುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.