ನೇಣು ಬಿಗಿದು ವೃದ್ಧ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಣಿಪಾಲ ಸಮೀಪದ ಅಲೆವೂರು ಗ್ರಾಮದ ಪದವು ಸಿದ್ದಾರ್ಥನಗರ ನಿವಾಸಿ ಕುಡ್ಪ (75) ಮನೆವ ಬಳಿಯ ಶೀಲಾ ಎಂಬವರಿಗೆ ಸೇರಿದ ಜಾಗದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೈದ ಕುಡ್ಪ ಯಾರೊಂದಿಗೂ ಹೆಚ್ಚು ಮಾತಾನಾಡುತ್ತಿಲ್ಲವಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಮೃತರ ಮಗ ಶಿವ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.