ಬಾಲಕಿಗೆ ಲೈಂಗಿಕ ದೌರ್ಜನ್ಯ : ಕೇಸು

ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ : ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಶಾಲಾ ಬಳಿಯ ಅಂಗಡಿಯೊಂದರಲ್ಲಿ ಸಾಮಾನು ಖರೀದಿಸಲೆಂದು  ಬಂದಿದ್ದ 7ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಂಗಡಿ ಮಾಲಿಕ ರಾಮಣ್ಣ (60) ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಗೆ ಸಾಮಾನು ಖರೀದಿಗೆ ಹೋಗಿದ್ದ ಬಾಲಕಿಯನ್ನು ಅಂಡಿಯೊಳಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದಾರೆಂಬುದು ಅವರ

ಮೇಲಿನ ಆರೋಪವಾಗಿದ್ದು, ಬಾಲಕಿ ಮನೆಗೆ ತೆರಳಿ ಈ ವಿಚಾರ ತಿಳಿಸಿದ ಮೇಲೆ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ.