ವ್ಯಕ್ತಿಗೆ ಮಾರಣಾಂತಿಕ ಹಲ್ಲೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮಣಿಪಾಲ ಠಾಣಾ ವ್ಯಾಪ್ತಿಯ ಪೆರಂಪಳ್ಳಿ ಎಂಬಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಕೈಗಳನ್ನು ಟವೆಲಿನಿಂದ ಕಟ್ಟಿಹಾಕಿ ಚೂರಿಯಿಂದ ಮಾರಣಾಂತಿಕ ಹಲ್ಲೆಗೈದು ಪರಾರಿಯಾದ ಘಟನೆ ನಡೆದಿದೆ.

ಮಲ್ಪೆ ಸಮೀಪದ ಪಂದುಬೆಟ್ಟು ದುರ್ಗಾಂಬ ಗ್ಯಾರೇಜ್ ಬಳಿ ನಿವಾಸಿ ಬಾಬು ಮಾರಣಾಂತಿಕ ಹಲ್ಲೆಗೊಳಗಾದವರು. ಪೆರಂಪಳ್ಳಿಗೆ ಹೋಗುವ ರಸ್ತೆ ಬಳಿ ದುಷ್ಕರ್ಮಿಗಳು ಬಾಬು ಕೈಗಳನ್ನು ಟವೆಲಿನಿಂದ ಕಟ್ಟಿಹಾಕಿ ಚಾಕು ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದಲ್ಲದೇ, ಚಾಕುವಿನಿಂದ ಬಾಬುವಿನ ಕುತ್ತಿಗೆಗೆ ತಿವಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬಾಬು ಪರಿಚಯದ ಮಲ್ಪೆ ಸಮೀಪದ ಪಂದುಬೆಟ್ಟು ದುಗಾಂಬ ಗ್ಯಾರೇಜ್ ಬಳಿಯ ನಿವಾಸಿ ಸುಮಿತ್ರಾ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಕೇಸು ದಾಖಲಾಗಿದೆ.