ಎಕ್ಕೂರಿನಲ್ಲಿ ಎಸ್ ಪಿ ಎಲ್ ಕ್ರಿಕೆಟ್ ಟೂರ್ನಿ ಉದ್ಘಾಟನೆ

 ಕ್ರೀಡಾ ಅಂಕಣಕಾರ ಜಗದೀಶ್ಚಂದ್ರಗೆ ಸನ್ಮಾನ

ನಮ್ಮ ಪ್ರತಿನಿಧಿ ವರದಿ

 ಮಂಗಳೂರು :  ನಗರದ ಎಕ್ಕೂರು ಫಿಶರೀಸ್ ಕಾಲೇಜು ಮೈದಾನದಲ್ಲಿ ಸೂಟರಪೇಟೆ ಪ್ರೀಮಿಯರ್ ಲೀಗ್ (ಎಸ್ ಪಿ ಎಲ್) ಕ್ರಿಕೆಟ್ ಟೂರ್ನಿ ಭಾನುವಾರ  ಆರಂಭಗೊಂಡಿತು.

ಈ ಟೂರ್ನಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ಉದ್ಘಾಟಿಸಿದರು. ಅವರು ಮಾತನಾಡಿ, “ಕ್ರೀಡೆ ಸಾಮರಸ್ಯದ ಸಂಕೇತ. ಪರಸ್ಪರ ಆತ್ಮೀಯತೆಯಿಂದ, ಸಹೋದರತೆಯಿಂದ ಆಡುವ ಕ್ರೀಡೆ ಜಾತಿ-ಧರ್ಮವನ್ನು ದೂರವಿಟ್ಟು ಸಹಬಾಳ್ವೆಯನ್ನು ಮೂಡಿಸುತ್ತದೆ. ಆ ಮೂಲಕ ಸೌಹಾರ್ದತೆಯ ಸಮಾಜ ನಿರ್ಮಾಣ ಸಾಧ್ಯ” ಎಂದು  ಹೇಳಿದರು.

ಈ ಸಂದರ್ಭದಲ್ಲಿ ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ  ಪುರಸ್ಕೃತ ಎಸ್ ಜಗದೀಶ್ಚಂದ್ರ ಅಂಚನ್ ಸೂಟರಪೇಟೆಯವರನ್ನು ಖಾದರ್ ಸನ್ಮಾನಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು  ವಿ ಮಿ ಮಾಜಿ ಸೆನೆಟ್ ಸದಸ್ಯರಾದ ಶ್ರೀಕರ ಪ್ರಭು ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಮೆಸ್ಕಾಂ ವಿಜಿಲೆನ್ಸ್ ಸೆಲ್  ಪೊಲೀಸ್ ಇನ್ಸಪೆಕ್ಟರ್ ಕೆ ಎಂ ಶರೀಫ್, ಮಂಗಳೂರು ವಿ ವಿ ವಾಣಿಜ್ಯ ವಿಭಾಗದ ಅಸೋಸಿಯೇಟ್ ಪೆÇ್ರಫೆಸರ್ ಯತೀಶ್ ಕುಮಾರ್, ಕ್ರೀಡಾ ಅಂಕಣಕಾರ ಎಸ್ ಜಗದೀಶ್ಚಂದ್ರ ಅಂಚನ್, ಉದ್ಯಮಿ ಸಮೀರ್, ಎಸ್ ಬಿ ಐ.ನ  ಎಸ್ ವಿ ಶಿವಪ್ರಸಾದ್  ಹಾಗೂ ಸಂಘಟಕರ ಪರವಾಗೀ ನಿತಿನ್ ಎಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.