ಈಜಿಪ್ತಿನ 500 ಕಿಲೋ ಭಾರದ ಮಹಿಳೆಗೆ ಭಾರತದಲ್ಲಿ ಚಿಕಿತ್ಸೆ

ನವದೆಹಲಿ : ಹಾಸಿಗೆ ಹಿಡಿದಿರುವ 500 ಕಿಲೋ ಮಣಭಾರದ ಈಜಿಪ್ತಿನ ಮಹಿಳೆಯೊಬ್ಬರಿಗೆ ಚಿಕಿತ್ಸೆ ನಿಮಿತ್ತ ಭಾರತಕ್ಕೆ ಆಗಮಿಸಲು ಕೈರೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ವೈದ್ಯಕೀಯ ವೀಸಾ ಜಾರಿ ಮಾಡಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಂಜೂರಾತಿ ನೀಡಿದ್ದಾರೆ.  36 ವರ್ಷದ ಎಮನ್ ಅಹ್ಮದ್ ಬಂದರು ನಗರ ಅಲೆಕ್ಸಾಂಡ್ರಿಯಾದ ನಿವಾಸಿಯಾಗಿದ್ದು, ಮುಂಬೈ ಮೂಲದ ವೈದ್ಯರೊಬ್ಬರ ವಿನಂತಿ ಮೇರೆಗೆ ಆ ಮಹಿಳೆಗೆ ವೈದ್ಯಕೀಯ ವೀಸಾ ಜಾರಿಯಾಗಿದೆ.

“ಈ ವಿಷಯ ನನ್ನ ಗಮನಕ್ಕೆ ತಂದಿರುವುದಕ್ಕೆ ಧನ್ಯವಾದಗಳು. ನಾವು ಆಕೆಗೆ ನೆರವಾಗವೆವು” ಎಂದು ವೈದ್ಯರ ಮನವಿಗೆ ಸ್ವರಾಜ್ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಡಾ ಮುಫ್ತಿ ಲಕ್ಡವಾಲಾರೂ ಟ್ವೀಟ್ ಮಾಡಿ, ಭಾರತದ ಸಹಕಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.