ಬಿ ಸಿ ರೋಡಲ್ಲಿ ಸಂಚಾರ ನಿಯಂತ್ರಣಕ್ಕೆ ಸತತ ಯತ್ನ

ಬಿಎನ್ಟಿಪಿಎಚ್2 : ಫ್ಲೈ ಓವರ್ ಅಡಿಭಾಗದಲ್ಲಿ ಚೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಹೃದಯ ಪಟ್ಟಣ ಬಿ ಸಿ ರೋಡಿನ ಟ್ರಾಫಿಕ್ ಕಿರಿ ಕಿರಿ ನಿಯಂತ್ರಿಸುವ ನಿಟ್ಟಿನಲ್ಲಿ ಇಲ್ಲಿನ ಟ್ರಾಫಿಕ್ ಪೊಲೀಸರು ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಬಿಎನ್ಟಿಪಿಎಚ್1 : ಬಿ ಸಿ ರೋಡು ಫ್ಲೈ ಓವರ್ ಅಡಿಭಾಗದಲ್ಲಿರುವ ವಾಹನಗಳನ್ನು ಟ್ರಾಫಿಕ್ ಪೊಲೀಸರು ತೆರವುಗೊಳಿಸುತ್ತಿರುವುದು
ಬಿಎನ್ಟಿಪಿಎಚ್1 : ಬಿ ಸಿ ರೋಡು ಫ್ಲೈ ಓವರ್ ಅಡಿಭಾಗದಲ್ಲಿರುವ ವಾಹನಗಳನ್ನು ಟ್ರಾಫಿಕ್ ಪೊಲೀಸರು ತೆರವುಗೊಳಿಸುತ್ತಿರುವುದು

ಬಿ ಸಿ ರೋಡು ಫ್ಲೈ ಓವರ್ ಅಡಿಭಾಗದಲ್ಲಿ ಬೇಕಾಬಿಟ್ಟಿ ಪಾರ್ಕ್ ಮಾಡಲಾಗಿದ್ದ ವಾಹನಗಳನ್ನು ಏಕಾಏಕಿ ತೆರವುಗೊಳಿಸಿ ಚೈನ್ ಅಳವಡಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿದ್ದಾರೆ. ಚೈನ್ ಅಳವಡಿಸಿ ಫ್ಲೈ ಓವರ್ ಅಡಿಭಾಗದಲ್ಲಿ ಅಚ್ಚುಕಟ್ಟಾಗಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಅದರಾಚೆಗೆ ಚೈನ್ ಹಾಕಿ ಸರ್ವಿಸ್ ಅಟೋ ರಿಕ್ಷಾಗಳಿಗೆ ಪಾರ್ಕಿಂಗ್ ವ್ಯವಸ್ಥೆಗೊಳಿಸಲಾಗುವುದು ಎಂದು ಎಸೈ ಚಂದ್ರಶೇಖರಯ್ಯ ತಿಳಿಸಿದ್ದಾರೆ.