ಕುಂಜತ್ತೂರು ಶಾಲೆಯಲ್ಲಿ ಶೈಕ್ಷಣಿಕ ಯೋಜನೆಗೆ ಚಾಲನೆ

ಕರಾವಳಿ ಅಲೆ  ವರದಿ

ಮಂಜೇಶ್ವರ : ವಿದ್ಯಾಭ್ಯಾಸ ಸಂರಕ್ಷಣಾ ಯಜ್ಞದ ಅಂಗವಾಗಿ ರೂಪಿಸಲಾದ ಶೈಕ್ಷಣಿಕ ಮಾಸ್ಟರ್ ಪ್ಲಾನಿಗೆ ಚಾಲನೆ ಹಾಗೂ ಘೋಷಣೆ ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯ ಸಭಾಂಗಣದಲ್ಲಿ ಜರುಗಿತು.

ಕಾಸರಗೋಡು ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರು ಮಾಸ್ಟರ್ ಪ್ಲಾನನ್ನು ಪ್ರಾಂಶುಪಾಲರಿಂದ ಸ್ವೀಕರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, “ಮರಳಿ ಬಾ ಶಾಲೆಗೆ ಎಂಬ ಪರಿಕಲ್ಪನೆಯೊಂದಿಗೆ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಸಂರಕ್ಷಣೆ ಹಾಗೂ ಶಿಕ್ಷಣ ಅಭಿವೃದ್ಧಿಗೆ ಸಂಘಟಿತರಾಗಿ ಮುನ್ನಡೆಯಬೇಕು” ಎಂದರು.

ನೂತನವಾಗಿ ಟೈಲ್ಸ್ ಹಾಕಿದ ಕೊಠಡಿಗಳ ಉದ್ಘಾಟನೆ ಕೂಡಾ ನಡೆಯಿತು. ಶಾಲಾ ತರಗತಿ ಕೊಠಡಿಗಳಿಗೆ ಟೈಲ್ಸ್ ಹಾಕಲು ಉದಾರ ದೇಣಿಗೆ ನೀಡಿದ ಡಾ ಜಯಪಾಲ ಶೆಟ್ಟಿ ಹಾಗೂ ನಿವೃತ ಶಿಕ್ಷಕ ಈಶ್ವರ ಮಾಸ್ಟರ್ ಮತ್ತಿತರರಿದ್ದರು.

LEAVE A REPLY