ಪಿಎಫ್ಐ ಮನಿ ನೆಟ್ವರ್ಕ್ ಜಾಲಾಡಲಿರುವ ಇ ಡಿ

ಸಾಂದರ್ಭಿಕ ಚಿತ್ರ

ನವದೆಹಲಿ :  ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯನ್ವಯದ ಪ್ರಕರಣಗಳ ಸಹಿತ ಹಲವಾರು ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಕೇರಳದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ  ಕಾರ್ಯಕರ್ತರ ವಿರುದ್ಧ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ಚಿಂತಿಸುತ್ತಿದೆ.

ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಉಗ್ರರಿಗೆ ಆರ್ಥಿಕ ನೆರವು ಪ್ರಕರಣಗಳ ಸಂಬಂಧ  ಕೈಗೊಂಡ ಕ್ರಮಗಳ ಮಾದರಿಯಲ್ಲಿಯೇ ಪಿಎಫ್‍ಐ ವಿರುದ್ಧವೂ ಕ್ರಮದ ಬಗ್ಗೆ ಯೋಚಿಸುತ್ತಿದೆ ಎಂದು `ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ.

ಪಿಎಫ್‍ಐ ಕಾರ್ಯಕರ್ತರು ಎರಡು ಡಜನಿಗೂ ಅಧಿಕ ಕೊಲೆ ಪ್ರಕರಣಗಳಲ್ಲಿ, 86 ಕೊಲೆ ಯತ್ನ ಪ್ರಕರಣಗಳು ಹಾಗೂ 100ಕ್ಕೂ ಅಧಿಕ ಕೋಮು ಸಂಬಂಧಿತ ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆಂದು ಹಾಗೂ ರಾಜ್ಯ ಪೊಲೀಸರು ಈಗಾಗಲೇ ಹಲವಾರು

 

ಪಿಎಫ್‍ಐ ಕಾರ್ಯಕರ್ತರನ್ನು ಬಂಧಿಸಿದೆಯೆಂದೂ ಕೇರಳ ಸರಕಾರ  ನ್ಯಾಯಾಲಯಕ್ಕೆ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆಯ ಮೂಲಕ ಪಡಕೊಳ್ಳಲಾದ ಆಸ್ತಿಗಳನ್ನು ಜಪ್ತಿಗೊಳಿಸುವ  ಅಧಿಕಾರವನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯನ್ವಯ ಜಾರಿ ನಿರ್ದೇಶನಾಲಯ ಹೊಂದಿದೆ. ಪ್ರೊಫೆಸರ್ ಕೈ ಕಡಿದ  ಪ್ರಕರಣ ಹೊರತಾಗಿ ಎಪ್ರಿಲ್ 2013ರಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಬಳಕೆಯ ಕುರಿತು ಕೆಲ ಯುವಕರಿಗೆ ತರಬೇತಿ ನಿಡಿದ ಆರೋಪವೂ ಪಿಎಫ್‍ಐ ಮೇಲಿದೆ. ಉಗ್ರ ಚಟುವಟಿಕೆಗಳಿಗೆ ಸಿದ್ಧಗೊಳಿಸಲೆಂದೇ ಯುವಕರಿಗೆ ಈ ತರಬೇತಿ ನೀಡಲಾಗಿತ್ತು ಹಾಗೂ ಇದು ದೇಶದ ಏಕತೆಗೆ ಹಾಗೂ ಭದ್ರತೆಗೆ ಅಪಾಯವೊಡ್ಡುವ  ಪ್ರಕರಣವಾಗಿದೆ ಎಂದು ಎನ್ನೈಎ ಹೇಳಿತ್ತು.

 

 

 

LEAVE A REPLY