ನೋಟು ಅಮಾನ್ಯೀಕರಣ ಬಳಿಕವೂ ಬದಲಾವಣೆ ಕಾಣದ ಅರ್ಥ ವ್ಯವಸ್ಥೆ

ಸಾಂದರ್ಭಿಕ ಚಿತ್ರ

ದೊಡ್ಡ ಮುಖಬೆಲೆ ನೋಟು ಅಮಾನ್ಯಗೊಂಡು ವರ್ಷವಾದರೂ ಭಾರತದಾದ್ಯಂತ ಇಂದು ಎಷ್ಟೋ ಬಡ ಕುಟುಂಬ ತುತ್ತು ಗಂಜಿಗಾಗಿ ಪರದಾಡುತ್ತಿವೆ ಉತ್ತರ ಪ್ರದೇಶ ಗುಜರಾತಿನಲ್ಲಿ ಆಮ್ಲಜನಕ ಕೊರತೆಯೋ ಆಹಾರದ ಕೊರತೆಯಿಂದಲೋ ಅಮಾಯಕ ಶಿಶುಗಳು ದಿನೇ ದಿನೇ ಮರಣದ ದಾರಿ ಹಿಡಿದಿವೆ ಕೋಟ್ಯಂತರ ವಿದ್ಯಾರ್ಥಿಗಳು ಕೆಲಸವಿಲ್ಲದೆ ಬೀದಿಪಾಲಾಗಿ ಖಿನ್ನತೆಯಿಂದ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ ಹೊಸ ಹೊಸ ಗರಿಗರಿ ನೋಟುಗಳು ನಾಣ್ಯಗಳು ಮಾತ್ರ ಮುದ್ರಣಗೊಂಡು ಬಂಡವಾಳಶಾಹಿಗಳ ಹಿತಾಸಕ್ತಿ ಕಾಪಾಡುತ್ತಿವೆ ಉಳ್ಳವರು ಮತ್ತು ಇಲ್ಲದವರ ನಡುವಿನ ಸ್ಥಿತಿಯೇ ಈ ಅಸಮಾನತೆಗೆ ಕಾರಣ ಕೇಂದ್ರ ಸರಕಾರದಲ್ಲಿ ಕೋಟಿಗಟ್ಟಲೆ ಹಣ ಕೊಳೆಯುತ್ತಿದೆ ಆದರೆ ರೈತರ ಸಾಲಮನ್ನಾ ಬೆಳೆಹಾನಿ ಪರಿಹಾರಕ್ಕೆ ಹಿಂದೇಟು ಹಾಕುತ್ತಾ ಕಣ್ಣಿದ್ದೂ ಕುರುಡರಂತೆ ಕಿವಿಯಿದ್ದೂ ಕಿವುಡರಂತೆ ನಟಿಸುತ್ತಿದೆ ನೋಟು ಅಮಾನ್ಯೀಕರಣವಾಗಿ ವರ್ಷ ಕಳೆದರೂ ಯಾವುದೇ ಬದಲಾವಣೆ ಕಾಣದೆ ಅರ್ಥ ವ್ಯವಸ್ಥೆ ನೆಲ ಕಚ್ಚಿದೆ ಆದ್ದರಿಂದಲೇ ಕಾಂಗ್ರೆಸ್ ನವೆಂಬರ್ 8ರಂದು ಕರಾಳ ದಿನವನ್ನಾಗಿ ಆಚರಿಸಲಾಯಿತು ಆದರೆ ಬಿಜೆಪಿ 2018ರ ಅಸೆಂಬ್ಲಿ ಚುನಾವಣೆಗೆ ಮಾತ್ರ ದೊಡ್ಡದಾದ ಶಿರೋನಾಮೆ ಕೊಟ್ಟು ಪರಿವರ್ತನಾ ಯಾತ್ರೆಯನ್ನು ಕೈಗೊಂಡಿದೆ ಇಲ್ಲಿ ಯಾರ ಪರಿವರ್ತನೆಯೋ ಗೊತ್ತಿಲ್ಲ ಇನ್ನು ಡಿಜಿಟಲ್ ಇಂಡಿಯಾ ಭ್ರಷ್ಟಾಚಾರಮುಕ್ತ ರಾಷ್ಟ್ರ ನವಭಾರತದ ಕನಸು ಯಾವಾಗ ಎಂಬುದು ತಿಳಿಯುತ್ತಿಲ್ಲ ನೀವೇ ಚಿಂತಿಸಿ

  • ಎಂ ಜನಾರ್ಧನ  ಸಫಲಿಗ ಎಡಪದವು