ದಿಲ್ಲಿಯಲ್ಲಿ ಭೂಕಂಪ

ನವದೆಹಲಿ : ನಿನ್ನೆ ಸಂಜೆ ದಿಲ್ಲಿ ಮತ್ತು ಉತ್ತರಾಖಂಡದಲ್ಲಿ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪನದಲ್ಲಿ 5.5 ದಾಖಲಾಗಿದ್ದ ಈ ಭೂಕಂಪದ ಕೇಂದ್ರ ಬಿಂದು ಉತ್ತರಾಖಂಡದ ರುದ್ರಪ್ರಯಾಗದಲ್ಲಿತ್ತು. ಈ ಕಂಪನ ದೇಶದ ಕೆಲವೆಡೆ ಅನುಭವಕ್ಕೆ ಬಂದಿದೆ. ಸಂಜೆ 8.45ಕ್ಕೆ ಸುಮಾರು 30 ಕಿ ಮೀ ವಿಸ್ತಾರಕ್ಕೆ ಭೂಕಂಪನ ಸಂಭವಿಸಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ.