ಉಪಯೋಗಕ್ಕಿಲ್ಲದ ಇ-ಟಾಯ್ಲೆಟ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಆನ್ಲೈನ್ ಟ್ಯಾಕ್ಸಿ ಸೇವೆಗಳಿಗೆ ಚಾಲನೆ ಸಿಕ್ಕಿ ಅಲ್ಲಿನ ಆಟೋರಿಕ್ಷಾ ಚಾಲಕರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಜಂಕ್ಷನ್ ನಿಲ್ದಾಣದಲ್ಲೂ ಸೆಪ್ಟೆಂಬರ್ 11ರಿಂದ ಆನ್ಲೈನ್ ಟ್ಯಾಕ್ಸಿ ಚಾಲಕರು ಸೇವೆ ಪ್ರಾರಂಭಿಸಿದ್ದಾರೆ.

ತಿಂಗಳ ಹಿಂದೆಯಷ್ಟೇ ಇಲ್ಲಿ ಫ್ರೀಪೇಯ್ಡ್ ಆಟೋ ರಿಕ್ಷಾ ಕೌಂಟರ್ ತೆರೆಯಲಾಗಿತ್ತು. ಇದೀಗ ಇಲ್ಲಿನ ಕೆಲವು ಆಟೋ ರಿಕ್ಷಾ ಚಾಲಕರಿಗೆ ಆನ್ಲೈನ್ ಸೇವೆ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ ಬಡ ಪ್ರಯಾಣಿಕರನ್ನು ಇನ್ನಿಲ್ಲದಂತೆ ದರ ವಸೂಲಿ ಮಾಡಿ ಪೀಡಿಸುತ್ತಿದ್ದವರಿಗೆ ಇದೀಗ ತಕ್ಕ ಶಾಸ್ತಿ ಆಗಿದೆ ಎಂದು ಸಾರ್ವಜನಿಕರು ಹರ್ಷಗೊಂಡಿದ್ದಾರೆ.

ದಕ್ಷಿಣ ವಿಭಾಗೀಯ ಪಾಲ್ಗಾಟ್ ರೈಲ್ವೇ ವಿಭಾಗದಿಂದ ಇದೀಗ ಇಲ್ಲಿ ಆನ್ಲೈನ್ ಸೇವೆ ನೀಡಲು ಪರವಾನಿಗೆ ನೀಡಲಾಗಿದ್ದು, ಜಂಕ್ಷನ್ ರೈಲ್ವೇ ನಿಲ್ದಾಣದ ಮುಂಭಾಗದಲ್ಲೇ ಕಿಯೋಸ್ಕ್ ಕೇಂದ್ರ ತೆರೆಯಲಾಗಿದೆ. ಅಲ್ಲದೇ ಇಲ್ಲಿ 5 ವಾಹನಗಳ ನಿಲುಗಡೆಗೂ ಅವಕಾಶ ಕಲ್ಪಿಸಲಾಗಿದೆ. ಆಟೋ ರಿಕ್ಷಾ ಫ್ರೀಪೇಯ್ಡ್ ಕೌಂಟರುಗಳು ಮತ್ತು ಆನ್ಲೈನ್ ಸೇವಾದಾರರ ನಡುವೆ ಇಲ್ಲಿ ವಿರಸ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಎರಡೂ ಸೇವೆಗಳೂ ಸುಸೂತ್ರವಾಗಿ ನಡೆಸಿಕೊಂಡು ಹೋಗುವಂತಾಗಲು ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತ ಪೊಲೀಸರಿಗೆ ಸೂಚಿಸಿದೆ.

“ಹಲವು ವರ್ಷಗಳಿಂದ ಇಲ್ಲಿ ಫ್ರೀಪೇಯ್ಡ್ ಕೌಂಟರ್ ಇದ್ದರೂ ಇಲ್ಲಿನ ಆಟೋ ರಿಕ್ಷಾ ಚಾಲಕರು ಅದನ್ನು ಬಳಸಿಕೊಳ್ಳದೇ ತಮಗೆ ತೋಚಿದಂತೆ ದುಪ್ಪಟ್ಟು ಪ್ರಯಾಣದರ ವಸೂಲಿ ಮಾಡಿ ಪ್ರಯಾಣಿಕರನ್ನು ಹಿಂಸಿಸುತ್ತಿದ್ದರು. ಅಲ್ಲದೇ ಬೇಕಾದ ಜಾಗಕ್ಕೆ ಬಾರದೇ ದುರಂಹಂಕಾರ ಮೆರೆಯುತ್ತಿದ್ದರು. ಇನ್ಮೇಲಾದರೂ ನೆಮ್ಮದಿಯಿಂದ ಪ್ರಯಾಣಿಸಬಹುದು” ಎನ್ನುತ್ತಾರೆ ಪ್ರಯಾಣಿಕ ಹರ್ಷವರ್ಧನ್.

“ಜಿಲ್ಲಾಧಿಕಾರಿಗಳೇ ಇಲ್ಲಿನ ಆಟೋ ರಿಕ್ಷಾ ಚಾಲಕರ ದುರ್ವತನೆಯನ್ನು ಅನುಭವಿಸಿದ್ದರು. ಹೀಗಾಗಿ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಉತ್ತಮ ಸೇವೆ ನೀಡುವ ಓಲಾ, ಉಬೇರ್ ಆನ್ಲೈನ್ ಸೇವೆ ಸುಸೂತ್ರವಾಗಿ ನಡೆಸಲು ಪೊಲೀಸರು ಇಲ್ಲಿ ಬಂದೋಬಸ್ತ್ ಕಲ್ಪಿಸಬೇಕು” ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಆಗ್ರಹಿಸಿದ್ದಾರೆ.