ಅಂಗನವಾಡಿ ಶಿಕ್ಷಕಿ ಸಾವು ತನಿಖೆ ಡಿವೈಎಸ್ಪಿಗೆ

ಆಯಿಷಾ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮುನಿಯೂರು ಅಂಗನವಾಡಿ ಶಿಕ್ಷಕಿ ಹಾಗೂ ಏತಡ್ಕ ಆನೆಪಳ್ಳ ನಿವಾಸಿ ಆಯಿಷಾರ ನಿಗೂಢ ಸಾವಿನ ಕುರಿತು ತನಿಖೆಯನ್ನು ಡಿವೈಎಸ್ಪಿಗೆ ಹಸ್ತಾಂತರಿಸಲಾಗಿದೆ.

ಈ ಪ್ರಕರಣದ ತನಿಖೆಯನ್ನು ಬದಿಯಡ್ಕ ಪೆÇಲೀಸರು ನಡೆಸುತಿದ್ದರು. ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರನ್ನು ಶೀಘ್ರ ಕಾನೂನಿನ ಮುಂದೆ ತರಲು ನಾಗರಿಕರಿಂದ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ಡಿ ವೈ ಎಸ್ಪಿಗೆ ಹಸ್ತಾಂತರಿಸಲಾಗಿದೆ.

ಆಯಿಷಾ ಕಳೆದ ನವಂಬರ್ 24ರಂದು ಬೆಳಿಗ್ಗೆ ಮನೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದರು. ಶರೀರದೊಳಗೆ ವಿಷ ಪದಾರ್ಥದಿಂದ ಸಾವು ಸಂಭವಿಸಿರುವುದಾಗಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದರು.

ಈಕೆಯ ಸಾವಿನ ಹಿಂದೆ ಕುಂಬ್ಡಾಜೆ ಪಂ. ನ ಒಬ್ಬ ಜನಪ್ರತಿನಿಧಿ ಇರುವುದಾಗಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಎಲ್ಲಾ ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು.