ಬಶೀರ್, ದೀಪಕಗೆ ಡಿಫಿ ಶ್ರದ್ಧಾಂಜಲಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಕೋಮುವಾದ, ಮತೀಯವಾದದ ಹೆಸರಿನಲ್ಲಿ ದಾಳಿ, ದಬ್ಬಾಳಿಕೆಗಳು ನಿರಂತರವಾಗಿ ನಡೆದು ಜಿಲ್ಲೆಯ ಹೆಸರನ್ನು ಹಾಳು ಮಾಡುತ್ತಿದೆ. ಧರ್ಮಗಳ ನಡುವಿನ ಸಂಬಂಧಗಳಿಗೆ ಹುಳಿ ಹಿಂಡಿ, ಅಧಿಕಾರದ ಖುರ್ಚಿಗೆ ಅಮಾಯಕರ ಬಲಿಯಾಗುತ್ತಿದೆ. ಇದರಿಂದಾಗಿ ಜನರ ನಡುವೆ ಅಪನಂಬಿಕೆ ಸೃಷ್ಟಿ ಮಾಡುವ, ತುಳುನಾಡಿನ ಸೌಹಾರ್ದತೆಗೆ ಏಟನ್ನು ನೀಡುವ ಕೆಲಸ ನಿರಂತರವಾಗಿ ಸಾಗಿದೆ. ಮತೀಯವಾದದ ಹೆಸರಿನಲ್ಲಿ ನಡೆಯುವ ಕೊಲೆಗಳಿಂದಾಗಿ ಭಾವೈಕ್ಯತೆಯನ್ನು ನಾಶ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ” ಎಂದು ಡಿವೈಎಫೈ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್ ಹೇಳಿದರು.

ಡಿವೈಎಫೈ ಉಳ್ಳಾಲ ವಲಯ ಸಮಿತಿ ವತಿಯಿಂದ ದೀಪಕ್ ರಾವ್ ಮತ್ತು ಬಶೀರ್ ಅವರ ಗೌರವಾರ್ಥ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

“ದೀಪಕ್ ರಾವ್ ಮೃತದೇಹವಿದ್ದ ವಾಹನದ ಮೇಲೆ ನಿಂತು ಭಾಷಣ ಮಾಡುವವರು ಹೆಣದ ಮೇಲೆ ರಾಜಕೀಯ ನಡೆಸುತ್ತಿರುವುದು ಸ್ಪಷ್ಟವಾಗಿದ್ದು, ಮಾನವೀಯತೆಯನ್ನು ಕೊಲ್ಲುವ ಕೆಲಸ ಜಿಲ್ಲೆಯಲ್ಲಿ ಆಗುತ್ತಿದೆ” ಎಂದರು.

 

LEAVE A REPLY