ಸಹಕಾರಿ ವಲಯವನ್ನು ರಕ್ಷಿಸಲು ನೌಕರರ ಸಂಘನೆಗಳ ಸಮಾವೇಶ

ವಿವಿಧ ಸಂಘಟನೆಗಳಿಂದ ನಡೆದ ಸಮಾವೇಶ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸಹಕಾರಿ ವಲಯವನ್ನು ನಾಶದತ್ತ ಕೊಂಡೊಯ್ಯುವ ಸರಕಾರದ ನಿಲುವನ್ನು ಖಂಡಿಸಿ ಅದನ್ನು ಸಂರಕ್ಷಿಸಲು ಬೇಕಾದ ಕ್ರಮಕ್ಕೆ ಸಜ್ಜಾಗಲು ಸದ್ರಿ ನೌಕರರ ಸಂಘಟನೆ ಸಮಾವೇಶ ನಡೆಸಿತು.

ಕಾಸರಗೋಡು ಸರ್ವೀಸ್ ಸಹಕಾರಿ ಬ್ಯಾಂಕ್ ಹಾಲಲ್ಲಿ ನಡೆದ ಸಮಾವೇಶದಲ್ಲಿ ಹಲವಾರು ಮಂದಿ ಪಾಲ್ಗೊಂಡರು.

ಕಾರ್ಯಕ್ರಮವನ್ನು ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಇದೀಗ ಸಹಕಾರಿ ವಲಯವು ಸಂಧಿಗ್ದಾವಸ್ಥೆಯಲ್ಲಿದೆ. ಇದು ನವಂಬರ್ 8ರಂದು ರಾತ್ರಿ ಆರಂಭಗೊಂಡಿರುವುದು ನಮಗೆಲ್ಲಾ ತಿಳಿದ ವಿಷಯ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ನಾನು ಕೂಡಾ ನಿಮ್ಮದೊಂದಿಗೆ ಕೈ ಜೋಡಿಸುವುದಾಗಿ” ವಾಗ್ದಾನ ನೀಡಿದರು. ಸಮಾವೇಶದಲ್ಲಿ ನೇತಾರರ ಸಹಿತ ಹಲವಾರು ಮಂದಿ ಪಾಲ್ಗೊಂಡರು.