ಎಸ್ ಬಿ ಐ ನೀತಿ ಹಿಂದಕ್ಕೆ ಪಡೆಯಲು ಡಿಫಿ ಆಗ್ರಹ

ಸಿಟಿ ಬ್ಯೂರೋ ವರದಿ

ಮಂಗಳೂರು : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಕೇಂದ್ರ ಕಾರ್ಯಕಾರಿ ಸಮಿತಿಯು ಬ್ಯಾಂಕಿಂಗ್ ವಹಿವಾಟುಗಳ ಶುಲ್ಕಗಳನ್ನು ವಿಪರೀತವಾಗಿ ಏರಿಸಿರುವ ಹಾಗೂ ಉಳಿತಾಯ ಖಾತೆಯಲ್ಲಿ ಇರಬೇಕಾದ ಕನಿಷ್ಠ ಮೊತ್ತದ ಮಿತಿಯನ್ನು ನ್ಯಾಯವಲ್ಲದ ರೀತಿಯಲ್ಲಿ ಹೆಚ್ಚಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೀತಿಯನ್ನು ಖಂಡಿಸಿ, ಈ ನಿಯಮಗಳನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹ ಪಡಿಸಿದೆ.

ಈಗಾಗಲೇ ಬೆಲೆಯೇರಿಕೆ, ನಿರುದ್ಯೋಗ, ಕೃಷಿ ಬಿಕ್ಕಟ್ಟುಗಳು ಮತ್ತು ನೋಟು ಅಮಾನ್ಯತೆಯಿಂದಾದ ದುಷ್ಪರಿಣಾಮಗಳಿಂದ ನಲುಗುತ್ತಿರುವ ಜನಸಾಮಾನ್ಯರಿಗೆ ಎಸ್‍ಬಿಐನ ಹೊಸ ನಿಯಮಗಳು ಭಾರೀ ಹೊಡೆತವನ್ನೇ ನೀಡಿದೆ ಎಂದು ಡಿವೈಎಫ್‍ಐ ಹೇಳಿದೆ.