ಅಪಹೃತ ಸಫ್ವಾನ್ ತಕ್ಷಣ ಪತ್ತೆಹಚ್ಚಿ : ಡಿಫಿ ಆಗ್ರಹ

ಸಾಂದರ್ಭಿಕ ಚಿತ್ರ

ಮಂಗಳೂರು : ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದಲ್ಲಿ ಸ್ಥಳೀಯ ಯುವಕ ಸಫ್ವಾನ್ ಎಂಬಾತನನ್ನು ರೌಡಿ ತಂಡವೊಂದು ಅಪಹರಿಸಿ ಒಂದು ವಾರಕಳೆದಿದ್ದು, ಹಾಡಹಗಲೇ ನಡುಬೀದಿಯಲ್ಲಿ ನಡೆದಿರುವ ಅಪಹರಣ ಪ್ರಕರಣವನ್ನು ಇದುವರೆಗೆ ಬೇಧಿಸಲು ಪೆÇಲೀಸರಿಗೆ ಸಾಧ್ಯವಾಗದಿರುವುದು ಆತಂಕಕಾರಿ ಸಂಗತಿ. ತಕ್ಷಣ ಪೆÇಲೀಸರು ಅಪಹರಣಕ್ಕೊಳಗಾದ ಸಫ್ವಾನನನ್ನು ಪತ್ತೆಹಚ್ಚಲು ಕ್ರಮಕೈಗೊಳ್ಳಬೇಕು. ಸುರತ್ಕಲ್, ಕೃಷ್ಣಾಪುರ ಪ್ರದೇಶದಲ್ಲಿ ಹಾವಳಿಯಿಡುತ್ತಿರುವ ಗಾಂಜಾ ದಂಧೆ, ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಬೇಕು ಎಂದು ಡಿವೈಎಫೈ ಸುರತ್ಕಲ್ ಘಟಕ ಪೆÇಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಸುರತ್ಕಲ್, ಕೃಷ್ಣಾಪುರ ಸೇರಿದಂತೆ ಆಸುಪಾಸಿನಲ್ಲಿ ರೌಡಿ ತಂಡಗಳ ಚಟುವಟಿಕೆ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಗಾಂಜಾ ಸಹಿತ ಮಾದಕ ಪದಾರ್ಥಗಳ ಮಾರಾಟ ಜಾಲ ಯುವಜನತೆಯನ್ನು ದಾರಿತಪ್ಪಿಸುತ್ತಿದೆ. ಸುಲಿಗೆ, ಬೆದರಿಸಿ ಹಣ ವಸೂಲಿ ದಂಧೆಗಳು ನಡೆಯುತ್ತಿದೆ. ಈ ಹಿಂದೆ ಹಲವು ಅಪಹರಣ, ಅತ್ಯಾಚಾರ, ಹಫ್ತಾ ವಸೂಲಿ, ದರೋಡೆ ಮುಂತಾದ ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡ ಕುಖ್ಯಾತ ಕ್ರಿಮಿನಲುಗಳು ಈ ಭಾಗದಲ್ಲಿ ಬೀಡು ಬಿಟ್ಟಿರುವುದು ಜನಸಾಮಾನ್ಯರ ನೆಮ್ಮದಿ ಕೆಡಿಸಿದೆ. ಇಂತಹ ಕುಖ್ಯಾತ ತಂಡವೊಂದು ಸಫ್ವಾನ್ ಎಂಬ ಯುವಕನನ್ನು ಬೆನ್ನಟ್ಟಿ ಸಾರ್ವಜನಿಕರ ಮುಂದೆಯೇ ಹಲ್ಲೆಗೈದು ಅಪಹರಿಸಿದೆ. ಅಪಹರಣ ನಡೆದು ವಾರ ಕಳೆದರೂ ಸಫ್ವಾನನನ್ನು ಪತ್ತೆಹಚ್ಚಲು, ಅಪಹರಿಸಿದ ರೌಡಿ ತಂಡವನ್ನು ಬಂಧಿಸಲು ಪೆÇಲೀಸರಿಗೆ ಸಾಧ್ಯವಾಗಿಲ್ಲ. ಇದು ಸ್ಥಳೀಯ ನಾಗರಿಕರಲ್ಲಿ ಭೀತಿಯನ್ನುಂಟು ಮಾಡಿದೆ. ಅಪಹರಣಗೊಂಡ ಸಫ್ವಾನ್ ಇರುವಿಕೆಯ ಬಗ್ಗೆ ಮಾಹಿತಿ ಇಲ್ಲದೆ ಆತನ ಬಡ ಕುಟುಂಬ ಕಂಗಾಲಾಗಿದೆ. ಪೆÇಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.  ಸ್ಥಳೀಯವಾಗಿ ಭೀತಿಯುಂಟು ಮಾಡುತ್ತಿರುವ ರೌಡಿ ಚಟುವಟಿಕೆ, ಗಾಂಜಾ ಮಾರಾಟ ಜಾಲವನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫೈ ಸುರತ್ಕಲ್ ಘಟಕ ಒತ್ತಾಯಿಸಿದೆ.

 

 

LEAVE A REPLY