ಪಾಲಿಕೆ ಒಳಚರಂಡಿ ಕಾಮಗಾರಿ ಕರ್ಮಕಾಂಡದಲ್ಲಿ ಜನಪ್ರತಿನಿಧಿಗಳ ಶಾಮೀಲು ಶಂಕೆ : ಡಿಫಿ ಆರೋಪ

ಕರಾವಳಿ ಅಲೆ  ವರದಿ

ಮಂಗಳೂರು : ಕೆಯುಐಡಿಎಫ್‍ಸಿ ಕೈಗೆತ್ತಿಕೊಂಡಿರುವ ನಗರ ಪಾಲಿಕೆಯ ಸೀವೇಜ್ ಪಂಪಿಂಗ್‍ಮೇನ್ ದುರಸ್ತಿ ಮತ್ತು ಬದಲಾವಣೆ ಯೋಜನೆ ಹಾಗೂ ಗುತ್ತಿಗೆ ನೀಡಿರುವಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಮೊಯ್ದೀನ್ ಬಾವ ಶಾಮೀಲಾಗಿದ್ದಾರೆ ಎಂದು ಡೆಮೋಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‍ಐ) ಸಂಘಟನೆ ಆರೋಪಿಸಿದೆ.

ಶಾಸಕ ಜೆ ಆರ್ ಲೋಬೋ ಅವರು ಕೂಡಾ ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ ಎಂದಿರುವ ಡಿವೈಎಫ್‍ಐ ನಾಯಕರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ. “ಯೋಜನೆಗೆ ಆರಂಭದಲ್ಲಿ 60 ಕೋಟಿ ರೂಪಾಯಿ ವೆಚ್ಚವನ್ನು ಕೆಯುಐಡಿಎಫ್‍ಸಿ ನಿಗದಿ ಮಾಡಿತ್ತು. ಬಳಿಕ ಪಂಪಿಂಗ್ ಮೇನ್ ಮ್ಯಾನ್‍ಹೋಲ್‍ಗಳ ದುರಸ್ತಿಗಾಗಿ 8 ಕೋಟಿ ರೂ, ರಸ್ತೆ ದುರಸ್ತಿಗಾಗಿ 5 ಕೋಟಿ ರೂ ಮತ್ತು ಇತರ ವೆಚ್ಚ ಹಾಗೂ ಜಿಎಸ್‍ಟಿ ಎಂದು ಟೆಂಡರ್ ಸಂದರ್ಭ ಮೊತ್ತವನ್ನು 94 ಕೋಟಿ ರೂಪಾಯಿಗೆ ಹೆಚ್ಚಿಸಲಾಯಿತು. ಇದು ಆರಂಭದಲ್ಲಿ ನಿಗದಿ ಮಾಡಿದ ಮೊತ್ತಕ್ಕಿಂತ ಶೇಕಡಾ 60ರಷ್ಟು ಹೆಚ್ಚಿದೆ. ಇದನ್ನು ಗಮನಿಸಿದಾಗ ಜನಪ್ರತಿನಿಧಿಗಳ ಶಾಮೀಲಾತಿಯಲ್ಲಿ ಈ ಅವ್ಯವಹಾರ ನಡೆದಿದೆ ಎನ್ನುವುದು ಸ್ಪಷ್ಟವಾಗಿದೆ” ಎಂದು ಸಂಘಟನೆ ಆರೋಪಿಸಿದೆ.

LEAVE A REPLY