ಎತ್ತಿನಹೊಳೆ ಪ್ರಶ್ನೆಗೆ ಡೀವಿ `ನೋ ಕಮೆಂಟ್ಸ್’

ಉಪ್ಪಿನಂಗಡಿ : ಖಾಸಗೀ ಭೇಟಿಯ ನಿಮಿತ್ತ ಜಿಲ್ಲೆಯಲ್ಲಿರುವ ಕೇಂದ್ರ ಮಂತ್ರಿ ಸದಾನಂದ ಗೌಡರಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ `ಪಂಚತೀರ್ಥ ಸಪ್ತ ಕ್ಷೇತ್ರ ರಥ ಯಾತ್ರೆ’ಗೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಪತ್ರಕರ್ತರು ಕೇಳಲು ಮುಂದಾದಾಗ ಪ್ರಶ್ನೆಯನ್ನು ಅರ್ಧದಲ್ಲೇ ತುಂಡರಿಸಿದ ಅವರು, “ಎತ್ತಿನ ಹೊಳೆ ಯೋಜನೆಯ ವಿಚಾರವಾಗಿ ಸಾಕಷ್ಟು ಬಾರಿ ಮಾಧ್ಯಮದೆದುರು ಮಾತನಾಡಿದ್ದೇನೆ. ಇನ್ನು ಈ ಬಗ್ಗೆ ಮಾತನಾಡುವುದಿಲ್ಲ. ನೋ ಕಮೆಂಟ್ಸ್” ಎಂದರು. ಪದೇ ಪದೇ ಪ್ರಶ್ನಿಸಿದಾಗ “ನೇತ್ರಾವತಿ ನದಿ ವಿಷಯದಲ್ಲಿ ನಾನು ಸುಮಾರು 50ಕ್ಕೂ ಹೆಚ್ಚು ಸಲ ಮಾತನಾಡಿದ್ದೇನೆ. ಒಬ್ಬ ಜನಪ್ರತಿನಿಧಿಯಾಗಿ ಒಂದು ಮಾತಿಗೆ ಬದ್ಧನಾಗಿರಬೇಕೇ ಹೊರತು, ಪದೇ ಪದೇ ಈ ಬಗ್ಗೆ ಮಾತನಾಡುವುದು ಸರಿಯಲ್ಲ” ಎಂದು ಹೇಳಿ ನುಣುಚಿಕೊಂಡರು.