ಬೈಕಂಪಾಡಿ ಪೋಸ್ಟಾಫೀಸ್ ಎದುರು ಧೂಳಿನಿಂದ ನಿತ್ಯವೂ ನರಕಯಾತನೆ

ಬೈಕಂಪಾಡಿ ಕೈಗಾರಿಕಾ ಪ್ರದೇಶ ಒಳ ಪ್ರವೇಶಿಸಿದರೂ ಎತ್ತ ನೋಡಿದರೂ ಧೂಳಿನದೇ ಕಾರುಬಾರು ಎಂಬಂತಾಗಿದೆ
ಒಂದು ಕಡೆ ಎಲ್ಲಿ ನೋಡಿದರೂ ಹೊಂಡ ಗುಂಡಿಗಳಿಂದ ಜರ್ಜರಿತ ಗೊಂಡ ರಸ್ತೆಗಳು  ಮತ್ತೊಂದೆಡೆ ಎತ್ತ ಹೋದರೂ ಧೂಳು ತುಂಬಿಕೊಂಡು ಇಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರ ಗೋಳು ಕೇಳುವವರಿಲ್ಲದಂತಾಗಿದೆ
ಸಾವಿರಾರು ಕಾರ್ಮಿಕರು ದಿನನಿತ್ಯ ಓಡಾಡುತ್ತಿರುವ ಇಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದುಕಾಣುತ್ತಿದೆ  ಸಮರ್ಪಕ ಒಳಚರಂಡಿಯಾಗಲಿ  ಒಳ ರಸ್ತೆಗಳ ಡಾಮರೀಕರಣ ಆಗಿಯೇ ಇಲ್ಲ  ದಾರಿ ದೀಪಗಳು ಕೆಟ್ಟು ಹೋದರೆ ತಿಂಗಳುಗಟ್ಟಲೆ ಸರಿ ಮಾಡುತ್ತಿಲ್ಲ
ಪಾಂಡವಬೆಟ್ಟು ಕೋಡ್ದಬ್ಬು ದೈವಸ್ಥಾನ ವೇಬ್ರಿಜ್ಜ್ ಬಳಿ ಒಮ್ಮೆ ಹೋದವರು ಮತ್ತೆ ಅಲ್ಲಿಂದ ತಿರುಗಿ ಹೋಗಲು ಸಾಧ್ಯವಿಲ್ಲದಷ್ಟು ರಸ್ತೆ ಪೂರಾ ಹೊಂಡ ಬಿದ್ದು ವಾಹನಗಳು ಹೋಗಲು ಅಸಾಧ್ಯವಾಗಿದೆ  ಮತ್ತೊಂದೆಡೆ ಪೋಸ್ಟ್ ಆಫೀಸ್‍ನಿಂದ ಬೈಕಂಪಾಡಿ ಜೋಕಟ್ಟೆ ಕ್ರಾಸಿನತನಕ ಧೂಳಿನಲ್ಲಿ ಅತ್ತಿತ್ತ ಹೋಗಲು ಸಾಧ್ಯವಿಲ್ಲದಂತಾಗಿದೆ  ಒಟ್ಟಿನಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಸ್ಥಿತಿ ಇಷ್ಟೊಂದು ಕಳಪೆ ಶೋಚನೀಯ ಸ್ಥಿತಿ ತಲುಪಿದ್ದರೂ ಕೇಳಬೇಕಾದ ಕೈಗಾರಿಕಾ ನಿಯಂತ್ರಣ ಮಂಡಳಿ ಏನು ಮಾಡುತ್ತಿದೆ   ಯಾಕಾಗಿಯಾದರೂ ಇದೆ   ಇಲ್ಲಿನ ಅಧಿಕಾರಿಗಳು ಎಲ್ಲಿ ಬಿಲ ಸೇರಿದ್ದಾರೆ

  • ಟಿ ಸುಲೈಮಾನ್  ಕುಡುಂಬೂರು