ಕಾರು ಚಾಲಕನ ದರೋಡೆ : ಅಪ್ರಾಪ್ತ ಸಹಿತ ಇಬ್ಬರ ಸೆರೆ

ಮಂಜೇಶ್ವರ : ಹೆದ್ದಾರಿಯಲ್ಲಿ ಕಾರನ್ನು ತಡೆದು ಚಾಲಕನ ಜೇಬಿನಿಂದ 3,500 ರೂ ದರೋಡೆಗೈದ ಪ್ರಕರಣದಲ್ಲಿ ಒಬ್ಬ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಮಂಜೇಶ್ವರ ಪೆÇಲೀಸರು ಸೆರೆ ಹಿಡಿದಿದ್ದಾರೆ. 17ರ ಹರೆಯದ ಒಬ್ಬ ಹಾಗೂ ಬೆಜ್ಜಂಗಳ ನಿವಾಸಿ ಮೊಯ್ದೀನ್ ಕುಂಞÂ (22) ಸೆರೆಯಾದವರು. ಇವರು ಪಾಲಕ್ಕಾಡ್ ನನ್ಮಾರ ನಿವಾಸಿ ಅಬ್ದುಲ್ ಹಕೀಂ(46)ರನ್ನು ಉಳ್ಳಾಲ ದರ್ಗಾದಿಂದ ಕಾರಿನಲ್ಲಿ ಊರಿಗೆ ತೆರಳುವ ಮಧ್ಯೆ ಹೊಸಂಗಡಿ ಹೆದ್ದಾರಿ ಬದಿ ಮಂಗಳವಾರ ಮುಂಜಾನೆ 3 ಗಂಟೆಗೆ ದರೋಡೆಗೈದರೆಂದು ದೂರು ದಾಖಲಿಸಲಾಗಿತ್ತು.  ಆರೋಪಿಗಳು ಸಂಚರಿಸಿದ್ದ ಸ್ಕೂಟರನ್ನು ಪೆÇಲೀಸರು ವಶಪಡಿಸಿದ್ದಾರೆ. ಸ್ಕೂಟರ್ ನಂಬ್ರ ತಿಳಿದು ಬಂದ ಹಿನ್ನೆಲೆಯಲ್ಲಿ ಪೆÇಲೀಸರು ತನಿಖೆ ನಡೆಸಿದಾಗ ಆರೋಪಿಗಳ ವಿಳಾಸ ಪತ್ತೆಯಾಗಿದ್ದು, ಇವರನ್ನು ಅವರವರ ಮನೆಯಿಂದಲೇ ಸೆರೆ ಹಿಡಿಯಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಇವರಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕನನ್ನು ಜುವೈನಲ್ ಹೋಂಗೂ, ಇನ್ನೊಬ್ಬನನ್ನು ಜೈಲಿಗೊಪ್ಪಿಸಲಾಗಿದೆ.

LEAVE A REPLY