ಲೂಟಿಗೈದು ಪರಾರಿಯಾದವರ ಬಂಧನ

ಸಾಂದರ್ಭಿಕ ಚಿತ್ರ

ಕರಾವಳಿ ಅಲೆ  ವರದಿ

ಮಂಗಳೂರು : ಯುವಕನೊಬ್ಬನನ್ನು ತಡೆದು ಲೂಟಿಗೈದು ಪರಾರಿಯಾಗಿದ್ದ

ಬಂದರ್ ನಿವಾಸಿ ಮುಹಮ್ಮದ್ ಫವಾದ್ (21) ಮತ್ತು ಕಂಕನಾಡಿ ನಿವಾಸಿ ಮಹಮ್ಮದ್ ಅಫ್ರಿದಿ (19) ಎಂಬವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ವಾಣೇಕರ್ ಎಂಬವರ ಜೊತೆಗೆ ರಾಜು ಸರಕಾರ್ ಫೆಬ್ರವರಿ 1ರಂದು ರಾತ್ರಿ 8.30ಕ್ಕೆ ಬೈಕಂಪಾಡಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರಿನಲ್ಲಿ ಬಂದ ಆರೋಪಿಗಳು ರಾಜುವನ್ನು ತಡೆದು ನಿಲ್ಲಿಸಿ ಅವರ ಬಳಿ ಇದ್ದ ಎರಡು ಮೊಬೈಲ್ ಹಾಗೂ 130 ರೂಪಾಯಿ ನಗದು ಕಿತ್ತು ಪರಾರಿಯಾಗಿದ್ದರು.

ಪೊಲೀಸರು ಪಣಂಬೂರು ಸಮೀಪದ ಕುದುರೆಮುಖ ಬಳಿ ಇಬ್ಬರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್, ಎರಡು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.

 

 

LEAVE A REPLY