ಟಾಲಿವುಡ್ಡಿಗೆ ವಿಜಯ್ ಎಂಟ್ರಿ

ಸ್ಯಾಂಡಲ್ವುಡ್ಡಿನ ಹಲವು ನಟರು ಈಗಾಗಲೇ ತೆಲುಗು ಚಿತ್ರರಂಗದಲ್ಲಿಯೂ ನಟಿಸಿ ಹೆಸರು ಗಳಿಸಿದ್ದಾರೆ. ಈಗ ದುನಿಯಾ ವಿಜಯ್ ಸಹ ನೆರೆಯ ಟಾಲಿವುಡ್ಡಿಗೆ ಎಂಟ್ರಿ ಹೊಡೆಯುತ್ತಿದ್ದಾನೆ. ಜೂನಿಯರ್ ಎನ್ಟಿಆರ್ ಅಭಿನಯದ `ಜೈ ಲವ ಕುಶ’ ಚಿತ್ರದಲ್ಲಿ ದುನಿಯಾ ವಿಜಿ ಖಳನಾಯಕನಾಗಿ ಮಿಂಚಲಿದ್ದಾನೆ.

ಈ ಚಿತ್ರದಲ್ಲಿ ವಿಜಯಗೆ ಆಫರ್ ಸಿಗಲು ಅವನ `ಮಾಸ್ತಿಗುಡಿ’ ಚಿತ್ರದ ವಿಭಿನ್ನ ಗೆಟಪ್ಪೇ ಕಾರಣ. ಚಿತ್ರದಲ್ಲಿಯ ವಿಜಯ್ ಫಸ್ಟ್ ಲುಕ್ ನೋಡಿ ಸ್ವತಃ ಜ್ಯೂ ಎನ್ಟಿಆರ್ ತಮ್ಮ ಚಿತ್ರಕ್ಕೆ ವಿಜಿಯನ್ನೇ ವಿಲನ್ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಸೂಚಿಸಿದ್ದಾರಂತೆ. ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಂತಹ ಬಿಗ್ ಹೀರೋ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕ ಬಗ್ಗೆ ವಿಜಯ್ ಫುಲ್ ಖುಶ್ ಆಗಿದ್ದಾನೆ.

ಸದ್ಯ 20 ದಿನಗಳ ಕಾಲ್‍ಶೀಟ್ ನೀಡಿರುವ ವಿಜಯ್ ತನ್ನ ಆದ್ಯತೆ ಯಾವಾಗಲೂ ಕನ್ನಡ ಸಿನಿಮಾಗೇ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾನೆ.