ಬಾಲಿವುಡ್ಡಿಗೆ ದಲ್ಕರ್ ಸಲ್ಮಾನ್

ತಮಿಳು ಚಿತ್ರ `ಓಕೆ ಕಣ್ಮಣಿ’ ಹಿಟ್ ಆಗಿದ್ದೇ ತಡ ಚಿತ್ರದ ಹೀರೋ ದಲ್ಕರ್ ಸಲ್ಮಾನ್ ಬಗ್ಗೆ ಕ್ರೇಜ್ ಕೂಡಾ ಹೆಚ್ಚಾಗಿದೆ. ತಮಿಳುನಾಡು ಮಾತ್ರವಲ್ಲ ರಾಜ್ಯದ ಗಡಿಯಾಚೆಗೂ ದಲ್ಕರ್ ಅಭಿಮಾನೀ ಬಳಗ ಹರಡಿತು. ಮೂಲತಃ ಮಲೆಯಾಳೀ ನಟ ದಲ್ಕರ್‍ಗೆ ಬಾಲಿವುಡ್ಡಿನಲ್ಲೂ ಆಫರ್ ಬರಲು ಶುರುವಾಯಿತು. `ಓಕೆ ಕಣ್ಮಣಿ’ ಹಿಂದಿ ರಿಮೇಕ್ `ಓಕೆ ಜಾನು’ ಚಿತ್ರದಲ್ಲಿ ನಟಿಸಲು ಕೂಡಾ ಆತನನ್ನು ಕೇಳಲಾಗಿತ್ತು. ಆದರೆ ಅದಕ್ಕವನು ಇಂಟ್ರೆಸ್ಟ್ ತೋರಿಸದ ಕಾರಣ ಆದಿತ್ಯಾ ರಾಯ್ ಕಪೂರ್ ಆ ಚಿತ್ರದಲ್ಲಿ ನಟಿಸಿದ್ದ.  ದಲ್ಕರ್ ಇಷ್ಟು ಸಮಯ ದಕ್ಷಿಣದಲ್ಲೇ ತನ್ನ ಸ್ಥಾನ ಇನ್ನಷ್ಟು ಭದ್ರ ಮಾಡಿಕೊಳ್ಳುವ ಕಡೆ ಗಮನಹರಿಸಿದ್ದ. ಈಗ ಬಾಲಿವುಡ್ ಚಿತ್ರದಲ್ಲೂ ತನ್ನ ಟ್ಯಾಲೆಂಟ್ ತೋರಲು ರೆಡಿಯಾಗಿದ್ದಾನೆ.

ದಲ್ಕರ್ ಸಲ್ಮಾನ್ ನಟಿಸಲಿರುವ ಚಿತ್ರವೊಂದು ಕಾಮಿಡಿ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಇರ್ಫಾನ್ ಖಾನ್ ಸಹ ಸಲ್ಮಾನನಿಗೆ ಜೊತೆಯಾಗುತ್ತಿದ್ದಾನೆ. ಇದೊಂದು ರೋಡ್ ಟ್ರಿಪ್ ಡ್ರಾಮಾ ಆಗಿದ್ದು ಮುಂದಿನ ತಿಂಗಳು ಕೇರಳದ ಕೆಲವು ಭಾಗಗಳಲ್ಲಿ ಚಿತ್ರೀಕರಣಗೊಳ್ಳಲಿದೆಯಂತೆ. ಈ ಮೊದಲು ಈ ಕಾಮಿಡಿ ಚಿತ್ರಕ್ಕೆ ಅಭಿಷೇಕ್ ಬಚ್ಚನ್ ಸಂಪರ್ಕಿಸಲಾಗಿತ್ತಾದರೂ ಆ ಸಮಯದಲ್ಲಿ ಜೂ ಬಚ್ಚನ್ ಜೆಪಿ ದತ್ತಾರ ಯುದ್ಧಕ್ಕೆ ಸಂಬಂಧಪಟ್ಟ ಚಿತ್ರ `ಪಲ್ಟನ್’ ಚಿತ್ರದಲ್ಲಿ ನಟಿಸುವುದರಿಂದ ಡೇಟ್ ಹೊಂದಾಣಿಕೆಯಾಗಿಲ್ಲ. ಈಗ ದಲ್ಕರ್ ಈ ಸಿನಿಮಾಗೆ ಫೈನಲೈಸ್ ಆಗಿದ್ದಾನೆ. ಚಿತ್ರವನ್ನು ಸ್ಕ್ರಿಪ್ಟ್ ರೈಟರ್ ಆಕಾಶ್ ಖುರಾನಾ ನಿರ್ದೇಶಿಸಲಿದ್ದಾರೆ.

ಅಂದ ಹಾಗೆ ದಲ್ಕರ್ ತಂದೆ ಮುಮ್ಮುಟ್ಟಿ ಕೂಡಾ ಕೆಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದರು.