ಅಕ್ರಮ ಮರಳು ದಂಧೆಕೋರರ ಗಡೀಪಾರಿಗೆ ದಸಂಸ ಒತ್ತಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಉಡುಪಿ ಡೀಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಹಾಗೂ ಗ್ರಾಮ ಕಾರಣಿಕ ಕಾಂತರಾಜು ಮೇಲೆ ಹಲ್ಲೆ ನಡೆಸಿದ ಮರಳು ಮಾಫಿಯಾ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಘಟಕಾಧ್ಯಕ್ಷ ರಮೇಶ್ ಕೋಟ್ಯಾನ್, ಉಡುಪಿ ಎಸ್ ಪಿ ಮೂಲಕ ಪ್ರಧಾನ ಮಂತ್ರಿಗೆ ದೂರು ನೀಡಿದ್ದಾರೆ.

ಡೀಸಿ ಮತ್ತು ಎಸಿಗೆ ಉಡುಪಿ ಜಿಲ್ಲೆಯಲ್ಲಿ ರಕ್ಷಣೆ ಸಿಗದಿರುವುದು ದಲಿತರಿಗೆ, ಹಿಂದುಳಿದವರಿಗೆ, ಬಡವರಿಗೆ, ರಕ್ಷಣೆ ಸಿಕ್ಕಿತೇ  ಎಂದು ದೂರಿನಲ್ಲಿ ದಸಂಸ ಪ್ರಶ್ನಿಸಿದೆ. “ಕೂಡಲೇ ಕರ್ನಾಟಕ ಸರಕಾರ ಉಡುಪಿ ಜಿಲ್ಲೆಯ ಅಕ್ರಮ ಮರಳು ದಂಧೆಕೋರರನ್ನು ಉಡುಪಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಉಡುಪಿ ಜಿಲ್ಲೆಯವರಿಗೆ ತೊಂದರೆಯಾಗದಂತೆ ಕಾನೂನನ್ನು ರೂಪಿಸಬೇಕು” ಎಂದು ದೂರಿನಲ್ಲಿ ದಸಂಸ ಆಗ್ರಹಿಸಿದೆ.