ಕುಡಿದ ಮಾವನಿಂದ ಅಳಿಯಗೆ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ :  ಕುಡಿದು ಬಂದ ಮಾವನೊಬ್ಬ ಅಳಿಯನಿಗೆ ಹಲ್ಲೆಗೈದು ಬಳಿಕ ಗೃಹೋಪಕರಣಗಳನ್ನು ಹಾನಿಗೈದ ಘಟನೆ ನಡೆದಿದೆ.

ಬದಿಯಡ್ಕ ಬಾಂಜತ್ತಡ್ಕ ನಿವಾಸಿ ರಾಜು (27) ಹಲ್ಲೆಯಿಂದ ಗಾಯಗೊಂಡಿದ್ದಾನೆ. ಈತನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕುಡುಕನಾಗಿರುವ ಮಾವ ಎಂದಿನಂತೆ ಬಂದು ಕ್ಷುಲ್ಲಕ ವಿಷಯದಲ್ಲಿ ತರ್ಕವನ್ನೆಬ್ಬಿಸಿ ಹಲ್ಲೆಗೈದ ಬಳಿಕ ಮನೆಯ ಪೀಠೋಪಕರಣಗಳನ್ನು ಹಾನಿಗೈದಿರುವುದಾಗಿ ಗಾಯಾಳು ರಾಜು ದೂರಿದ್ದಾರೆ. ಪೆÇಲೀಸರು ಕೇಸು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.