ಕುಡಿದು ವಾಹನ ಚಲಾಯಿಸುವ ಚಾಲಕರು ಮತ್ತೊಬ್ಬರ ಜೀವ ಬಲಿ ತೆಗೆದುಕೊಳ್ಳದಿರಲಿ

ಅವಿಭಜಿತ ದ ಕ ಜಿಲ್ಲೆಯಲ್ಲಿಯೂ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಇದರಲ್ಲಿ ಬಹುಪಾಲು ಅವಘಡಗಳಿಗೆ ಭಾರೀ ಪ್ರಮಾಣದ ವಾಹನ ಚಾಲಕರು ಹಾಗೂ ಲಘು ಪ್ರಮಾಣದ ವಾಹನ ಚಾಲಕರು ಕುಡಿದು ವಾಹನ ಚಲಾಯಿಸುವುದೇ ಕಾರಣ.
ಲಾರಿ ಚಾಲಕರು ಮಾಡುವ ತಪ್ಪಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಕುಡಿದು ಡ್ರೈವಿಂಗ್ ಮಾಡುವವರಿಗೆ ಕೇಂದ್ರ ಸರಕಾರದ ಹೊಸ ಕಾನೂನಿನ ಪ್ರಕಾರ 10,000 ರೂ ದಂಡ ವಿಧಿಸಬಹುದಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪೊಲೀಸರು ಪಾಲಿಸಿದ್ದೆ ಆದಲ್ಲಿ ಯಾವ ಚಾಲಕರೂ ಕುಡಿದು ಡ್ರೈವಿಂಗ್ ಮಾಡಲು ಹೋಗುವುದಿಲ್ಲ. ಆದರೆ, ಪೊಲೀಸರು ಕುಡಿದ ವ್ಯಕ್ತಿಯಿಂದ ಸ್ವಲ್ಪ ಹಣ ಪಡೆದು ಯಾವುದೇ ಕೇಸ್ ಮಾಡದೆ ಹಾಗೆ ಬಿಟ್ಟು ಬಿಡುತ್ತಿದ್ದಾರೆ. ಇನ್ನು ಮುಂದೆಯಾದರೂ ಪೊಲೀಸರು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ಒಟ್ಟಿನಲ್ಲಿ ಮಜಕಿಗೋಸ್ಕರ ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ಅಮಾಯಕ ಮತ್ತೊಬ್ಬರ ಜೀವ ಬಲಿ ತೆಗೆದುಕೊಳ್ಳದಿರಿ

  • ಚಂದ್ರಹಾಸ ಬಂಗೇರ  ಚಿಲಿಂಬಿ  ಮಂಗಳೂರು