ಗಾಂಜಾ ವ್ಯಸನಿ ವಿದ್ಯಾರ್ಥಿಗಳ ಸೆರೆ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಉಡುಪಿ : ಗಾಂಜಾ ವ್ಯಸನಿಗಳಾದ ಮಣಿಪಾಲ ಎಂಐಟಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಗಳಾದ ಸಾತ್ವಿಕ್ ಮೊಹಂತಿ (21), ರಾಘವ್ ತನೇಜಾ (22), ಶಿವಾಂಕ್ ಶೇಖರ್ (21) ಹಾಗೂ  ಸುಯಶ್ ಸಿಂಗ್ (20) ಬಂಧಿತ ಆರೋಪಿಗಳು. ಆರೋಪಿಗಳಾದ ಸಾತ್ವಿಕ್ ಮೊಹಂತಿ, ಶಿವಾಂಕ್

ಶೇಖರ್ ಹಾಗೂ ಸುಯಶ್ ಸಿಂಗ್ ಮಣಿಪಾಲ ಡೀಸಿ ಕಚೇರಿ ರಸ್ತೆ ಬಳಿಯ ಪ್ರಗತಿ ಪ್ರೈಡ್ ಅಪಾರ್ಟಮೆಂಟಿನಲ್ಲಿ ವಾಸವಾಗಿದ್ದು, ಅಲ್ಲೇ ಗಾಂಜಾ ಸೇವಿಸುತ್ತಿದ್ದರೆ, ಇನ್ನೊಬ್ಬ ಆರೋಪಿ ರಾಘವ್ ತನೇಜಾ ಮಣಿಪಾಲದ ಐಡಿಯಲ್ ರೆಸಿಡೆನ್ಸಿಯಲ್ಲಿ ವಾಸವಾಗಿದ್ದು, ಮಣಿಪಾಲದ ಅಭಿ ಪಾಲ್ಸಿನಲ್ಲಿ ಗಾಂಜಾ ಸೇವಿಸುತ್ತಿದ್ದಾಗ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಮಣಿಪಾಲದ ಡೀಸಿ ಕಚೇರಿ ರಸ್ತೆ ಬಳಿಯಿರುವ ಪ್ರಗತಿ ಪ್ರೈಡ್ ಅಪಾರ್mಮೆಂಟಿನಲ್ಲಿ ವಾಸವಾಗಿದ್ದ ಆಂಧ್ರಪ್ರದೇಶ ಮೂಲದ, ಎಂಐಟಿ ವಿದ್ಯಾರ್ಥಿ ಸಂದೀಪ್ ಎಂಬಾತ ಗಾಂಜಾ ಸೇವಿಸಿ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.