ಅಪಘಾತದಲ್ಲಿ ಸಾವಿಗೆ ಕಾರಣನಾದ ಚಾಲಕನಿಗೆ ವರ್ಷ ಜೈಲು, ದಂಡ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ರಸ್ತೆ ಬದಿ ನಿಂತಿದ್ದ ಲಾರಿ ಚಾಲಕನ ಸಾವಿಗೆ ಕಾರಣವಾಗುವ ರೀತಿಯಲ್ಲಿ ಅಪಘಾತವೆಸಗಿದ ಪ್ರಕರಣದಲ್ಲಿ ಆರೋಪಿ ಕಾರು ಚಾಲಕ ಹಿತೇಶ್ ಯಾನೆ ದಿಲೀಪ್ ಮೆನೆಜಸ್ ಎಂಬಾತನಿಗೆ ಬಂಟ್ವಾಳ ಜೆಎಂಎಫ್‍ಸಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

2013 ರ ಜುಲೈ 6 ರಂದು ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ರಾಮಲ್‍ಕಟ್ಟೆ ಎಂಬಲ್ಲಿ ಲಾರಿ ಚಾಲಕ ಎನ್ ಎ ಅಬ್ದುಲ್ ಅಝೀಝ್ ಎಂಬವರು ಲಾರಿ ನಿಲ್ಲಿಸಿ ರಸ್ತೆ ಬದಿ ನಿಂತಿದ್ದ ವೇಳೆ ಮಂಗಳೂರು ತಾಲೂಕಿನ ಬೋಂದೆಲ್ ನಿವಾಸಿ ಹಿತೇಶ್ ಯಾನೆ ದಿಲೀಪ್ ವಿನೇಜಸ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದ ಪರಿಣಾಮ ಲಾರಿ ಚಾಲಕ ಅಝೀಝ್ ಮೃತಪಟ್ಟಿದ್ದರು.      ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.