ಲಾರಿ ಪಲ್ಟಿ : ಚಾಲಕಗೆ ಗಾಯ

ನಮ್ಮ ಪ್ರತಿನಿಧಿ ವರದಿ

ಕುಮಟಾ : ತಾಲೂಕಿನ ಮಿರ್ಜಾನದ ಕುದುರೆಹಳ್ಳಕ್ಕೆ ಬುಧವಾರ ಲಾರಿಯೊಂದು ಪಲ್ಟಿಯಾಗಿ ಬಿದ್ದ ಪರಿಣಾಮ ಚಾಲಕ ಗಾಯಗೊಂಡಿದ್ದಾನೆ.

ಲಾರಿ ಚಾಲಕ ಮಂಗಳೂರಿನಿಂದ ಕೋಕ್ ತುಂಬಿಕೊಂಡು ಹುಬ್ಬಳ್ಳಿ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಮಿರ್ಜಾನ್ ಬಳಿ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಹುಬ್ಬಳ್ಳಿ ನಿವಾಸಿ ಲಾರಿ ಚಾಲಕ ಮೋಹನಗೆ ಗಂಭೀರ ಗಾಯವಾಗಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾರಗಳ ಡಿಕ್ಕಿ , ಇಬ್ಬರು ಗಂಭೀರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾರುಗಳೆರಡು ಡಿಕ್ಕಿಯಾಗಿ ನಡೆದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಘಟನೆ ಗುರುವಾರ ಸಂಜೆ ಕೆಪಿಟಿ ಬೊಂದೇಲ್ ನಡುವಿನ ಯೆಯ್ಯಾಡಿ ಜಂಕ್ಷನ್ ಬಳಿ ನಡೆದಿದೆ.

ಪದವಿನಂಗಡಿಯಿಂದ ಕೆಪಿಟಿ ಕಡೆಗೆ ತೆರಳುತ್ತಿದ್ದ ಟಯೋಟಾ ಮತ್ತು ಪದವಿನಂಗಡಿ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.  ಮಾರುತಿ ಯೆಯ್ಯಾಡಿ ಜಂಕ್ಷನ್ ಬಳಿ ಬಲಭಾಗಕ್ಕೆ ತಿರುಗಿಸಲು ಮುಂದಾಗುತ್ತಿದ್ದಂತೆ ಟಯೋಟಾ ಇನ್ನೊಂದು ದಿಕ್ಕಿನಿಂದ ಬಂದು ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎರಡೂ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದೆ.