ಲಾರಿ ಉರುಳಿಬಿದ್ದು ಚಾಲಕ ಸ್ಪಾಟ್ ಡೆತ್

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ದಾಸಕೋಡಿ ತಿರುವಿನಲ್ಲಿ ದ್ವಿಚಕ್ರ ವಾಹನವನ್ನು ತಪ್ಪಿಸಲು ಲಾರಿ ಚಾಲಕ ಪ್ರಯತ್ನಿಸಿದ ವೇಳೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಲಾರಿ ರಸ್ತೆಗೆ ಉರುಳಿ ಬಿದ್ದು ಚಾಲಕ ಮೃತಪಟ್ಟ ದಾರುಣ ಘಟನೆ ಮಂಗಳವಾರ ನಡೆದಿದೆ.      ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ಸುರೇಶ್ (45) ಎಂಬವರೇ ಮೃತ ಲಾರಿ ಚಾಲಕ. ದಾಸಕೋಡಿ ತಿರುವು ಬಳಿ ಲಾರಿಗೆ ಅಡ್ಡವಾಗಿ ಬಂದ ಆಕ್ಟಿವಾ ವಾಹನವನ್ನು ತಪ್ಪಿಸಲು ಲಾರಿ ಚಾಲಕ ಪ್ರಯತ್ನಪಟ್ಟಾಗ ನಿಯಂತ್ರಣ ತಪ್ಪಿ ಲಾರಿ ರಸ್ತೆಗೆ ಉರುಳಿ ಬಿದ್ದು ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಲಾರಿ ಕ್ಲೀನರ್ ಹೆಬ್ರಿ ನಿವಾಸಿ ಗುರುದತ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ದ್ವಿಚಕ್ರ ವಾಹನ ಕೂಡಾ ರಸ್ತೆ ಡಿವೈಡರ್‍ಗೆ ಡಿಕ್ಕಿ ಹೊಡೆದಿದ್ದು, ಚಾಲಕ ಅದೃಷ್ಟವಶಾತ್ ಪಾರಾಗಿದ್ದಾನೆ ಎನ್ನಲಾಗಿದೆ.