ಡ್ರೈನೇಜ್ ಗುಂಡಿ ಡೇಂಜರ್

ಉಡುಪಿಯ ನಗರದ ಪ್ರಮುಖ ರಸ್ತೆಗಳು ಮತ್ತು ನಗರದಿಂದ ಬಡಾವಣೆಗಳನ್ನು ಸಂಪರ್ಕಿಸುವ ಒಳ ರಸ್ತೆಗಳ ನಡುವೆ ಡ್ರೈನೇಜ್ ಚೇಂಬರುಗಳ ಬಾಯಿ ಮುಚ್ಚಳ  ಡಾಂಬರು ರಸ್ತೆಯ ಸಮಮಟ್ಟಕ್ಕೆ ಇರದ ಕಾರಣ  ರಸ್ತೆಗಳಲ್ಲಿ ಗುಂಡಿಗಳು ಸ್ವಯಂ ನಿರ್ಮಾಣಗೊಂಡಿವೆ  ಇದರ ಪರಿಣಾಮವಾಗಿ ವಾಹನ ಅಪಘಾತ ನಡೆಯುತ್ತಿವೆ  ರಾತ್ರೆ ಸಮಯದಲ್ಲಿ ಬೈಕ್ ಸವಾರರಿಗೆ ಈ ಗುಂಡಿಗಳು ತಿಳಿದುಬಾರದೆ  ಮೃತ್ಯು ಕೂಪವಾಗಿ ಸಾವು ನೋವುಗಳಿಗೆ ಕಾರಣವಾಗುತ್ತಿದೆ  ಸಂಬಂಧ ಪಟ್ಟವರು ರಸ್ತೆಗಳ ಸಮಿಕ್ಷೆ ಮಾಡಿ  ಗುಂಡಿಗಳ ಗುರುತಿಸಿ ಮುಚ್ಚಿಸುವ ವ್ಯವಸ್ಥೆ ಮಾಡ ಬೇಕಾಗಿದೆ

  • ತಾರಾನಾಥ್ ಮೇಸ್ತ  ಉಡುಪಿ