ರಣವೀರ್ ಡ್ರೆಸ್ಸಿಂಗ್ ಸ್ಟೈಲ್ ಟೀಕಿಸಿದ ಡಿಪ್ಪಿ

Deepika Padukone Beauty Tips

ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಎಂಗೇಜ್ಮೆಂಟ್ ರೂಮರ್ ನಡುವೆಯೇ ದೀಪಿಕಾ ಪಡುಕೋಣೆ ತನ್ನ ಕನಸಿನ ಮದುವೆ ಬಗ್ಗೆ ಶೋವೊಂದರಲ್ಲಿ ಮಾತಾಡಿದ್ದಾಳೆ. ಅದೇ ಸಮಯದಲ್ಲಿ ತನ್ನ ಬಾಯ್ಫ್ರೆಂಡ್ ರಣವೀರ್ ಡ್ರೆಸ್ಸಿಂಗ್ ಸ್ಟೈಲನ್ನೂ ಟೀಕಿಸಿದ್ದಾಳೆ ಡಿಪ್ಪಿ.

ನೇಹಾ ದೂಪಿಯಾಳ ಟಾಕ್ ಶೋವೊಂದರಲ್ಲಿ ದೀಪಿಕಾ ತನ್ನ ಸಹೋದರಿ ಅನಿಶಾ ಜೊತೆ ಪಾಲ್ಗೊಂಡಿದ್ದು ಆ ಸಮಯದಲ್ಲಿ ಆಕೆ ತನ್ನ ಕನಸಿನ ಮದುವೆ ಬಗ್ಗೆಯೂ ಹೇಳಿಕೊಂಡಿದ್ದಾಳೆ. ದೀಪಿಕಾ ಕೂಡಾ ಅನುಷ್ಕಾ ಶರ್ಮಾಳಂತೆ ಸವ್ಯಸಾಚಿ ಮುಖರ್ಜಿಯ ಡಿಸೈನರ್ ಡ್ರೆಸ್ಸನ್ನೇ ತನ್ನ ಮದುವೆಯಲ್ಲಿ ಧರಿಸಲು ಬಯಸಿದ್ದಾಳೆ. ಇದೇ ಸಮಯದಲ್ಲಿ ನೇಹಾ ದೀಪಿಕಾ ಬಳಿ `ರಣವೀರ್ ಯಾವುದನ್ನು ನಿಲ್ಲಿಸಬೇಕು?’ ಎಂದು ಕೇಳಿದಾಗ ಡಿಪ್ಪಿ ಆತನ `ಅತಿರೇಕದ ಡ್ರೆಸ್ಸಿಂಗ್ ಸ್ಟೈಲ್ ನಿಲ್ಲಿಸಬೇಕು’ ಎಂದು ಹೇಳಿದಾಗ ನೇಹಾ ಹಾಗೂ ದೀಪಿಕಾ ತಂಗಿ ಅನಿಶಾ ಗೊಳ್ಳನೆ ನಕ್ಕುಬಿಟ್ಟರು.

LEAVE A REPLY