ಮೈಸೂರಿನಲ್ಲಿ ಡಬಲ್ ಮರ್ಡರ್

ಅಕ್ರಮ ಸಂಬಂಧ ಎಫೆಕ್ಟ್

ಮೈಸೂರು : ಅಕ್ರಮ ಸಂಬಂಧ ಹೊಂದಿದ್ದ ಪೂಜಾರಿಯೊಬ್ಬ ಹಣಕಾಸಿನ ವಿಚಾರವಾಗಿ ಆಕೆ ಮತ್ತು ಮಗಳನ್ನು ಕೊಂದು ಬಾವಿಗೆ ಎಸೆದ ಘಟನೆ ಮೈಸೂರು ಸಮೀಪದ ಉತ್ತನಹಳ್ಳಿಯಲ್ಲಿ ನಡೆದಿದೆ.

double-murder-2

ಕೊಲೆಯಾದವರನ್ನು ಸವಿತಾ ಹಾಗೂ ಆಕೆಯ ಮಗಳು ಕೀರ್ತನ ಎಂದು ಗುರುತಿಸಲಾಗಿದ್ದು, ಉತ್ತನಹಳ್ಳಿಯ ಶನಿದೇವರಗುಡ್ಡಪ್ಪ ಮಹೇಶ ಕೊಲೆಗೈದ ಆರೋಪಿ. ಈ ಹಿಂದೆ ಆರೋಪಿ ಮಹೇಶ್, ಸವಿತಾ ಬಳಿ ಚಿನ್ನ ಹಾಗೂ ಹಣವನ್ನು ಸಾಲ ಪಡೆದಿದ್ದ, ಈ ಹಣ ಮತ್ತು ಚಿನ್ನವನ್ನು ವಾಪಸ್ ಕೇಳಿದ್ದಕ್ಕೆ ತಾಯಿಮಗಳನ್ನು ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ.

ಮೈಸೂರು ತಾಲೂಕು ಉತ್ತನಹಳ್ಳಿಯ ಸವಿತಾಳನ್ನು ಕೀಳನಪುರಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಆದರೆ ಅಕ್ರಮ ಸಂಬಂಧವಿದ್ದ ಕಾರಣ ಮತ್ತೆ ಉತ್ತನಹಳ್ಳಿಗೆ ಪೂಜಾರಿ ರಮೇಶ ಸವಿತಾಳನ್ನು ಕರೆತಂದಿದ್ದ. ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಜಗಳ ತೆಗೆದಿತ್ತು. ಬಳಿಕ ಪೂಜಾರಿ ಮಹೇಶ ಉತ್ತನಹಳ್ಳಿ ತೋಟವೊಂದರಲ್ಲಿ ತಾಯಿ ಮಗಳನ್ನು ಹೊಡೆದು ಬಾವಿಗೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.

ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಸಂಬಂಧ ಹೊಂದಿದ್ದ ಆರೋಪಿ ಮಹೇಶನನ್ನು ಪೆÇಲೀಸರು ವಶಕ್ಕೆ ಪಡೆದಿದ್ದು ವಿಚಾರಣೆಗೊಳಪಡಿಸಿದ್ದಾರೆ.