ಜಯಂತಿಗಳಿಗೆ ರಜೆ ಬೇಡ

ವರ್ಷದಲ್ಲಿ ಸ್ವಾತಂತ್ರ್ಯೋತ್ಸವ ಗಣರಾಜ್ಯೋತ್ಸವ ಅಂಬೇಡ್ಕರ್ ಜಯಂತಿ ಗಾಂಧಿ ಜಯಂತಿ ಕನ್ನಡ ರಾಜ್ಯೋತ್ಸವಕ್ಕೆ ಮಾತ್ರ ಸರಕಾರ ರಜೆ ಸಾಕು ಉಳಿದಂತೆ ಇರುವ ಎಲ್ಲ ಜಯಂತಿ ರದ್ದು ಮಾಡಬೇಕೆಂದು ಸಾಹಿತಿ ಚಂದ್ರಶೇಖರ ಪಾಟೀಲರು ಒತ್ತಾಯಿಸಿದ್ದು ಇದೊಂದು ಉಪಯುಕ್ತ ಸಲಹೆ ಜಯಂತಿಗಳಿಗೆ ರಜೆ ಕೊಡುವುದರಿಂದ ಯಾವ ಸರಕಾರಿ ಕಚೇರಿಗಳಿಗೆ ಹೋದರೂ ಅಲ್ಲಿ ಅಧಿಕಾರಿಗಳೇ ಇರುವುದಿಲ್ಲ ಇಂಥ ಸಂದರ್ಭ ಸಾಲು ಸಾಲು ರಜೆಗಳಿಂದ ಸಾರ್ವಜನಿಕ ಬವಣೆ ಹೆಚ್ಚುತ್ತದೆ ರಜೆ ಸಂಸ್ಕøತಿಯನ್ನು ತೆಗೆದು ಹಾಕಿ ಕಾಯಕ ಸಂಸ್ಕøತಿ ಬೆಳೆಸಲಿ

  • ಸುಹಾಸ್ ಸಾಲ್ಯಾನ್  ಕಾರ್ಕಳ