ಹೊರಗಿನವರು ಉಕ್ಕುಡ ಜಮಾಅತನ್ನು ಒಡೆಯಬೇಡಿ

ವಿಟ್ಲ ಸಮೀಪದ ಉಕ್ಕುಡ ಜಮಾಅತ್ ಕುಂಬೋಳ್ ತಂಜಳ್ ಅವರ ನೇತೃತ್ವದಲ್ಲಿ ಯಾವುದೇ ಗುಂಪುಗಾರಿಕೆ, ಗ್ರೂಪಿಸಂ ಇಲ್ಲದೆ ಅಚ್ಚುಕಟ್ಟಾಗಿ ಅನ್ಯೋನ್ಯತೆಯಿಂದ ನಡೆಯುತ್ತಿದೆ. ಈಗ ಈ ಶುಭ್ರವಾದ ಹಾಲಿನಂತಿರುವ ಈ ಜಮಾಅತಗೆ ಹುಳಿ ಹಿಂಡಲು ಕಡಂಬುವಿನ ಹಸಿರು ಶಾಲಿನ ವ್ಯಕ್ತಿಯೊಬ್ಬರು ಶತಪ್ರಯತ್ನ ಮಾಡುತ್ತಿದ್ದಾರೆ. ಬಂಬ್ರಾಣ ಜಮಾಅತನ್ನು ಒಡೆದು ಅಲ್ಲಿನ ಜನರನ್ನು ಪರಸ್ಪರ ಕಚ್ಚಾಡುವಂತೆ ಮಾಡಿದ ಈ ವ್ಯಕ್ತಿ ಈಗ ಉಕ್ಕುಡ ಜಮಾಅತನ್ನು ಛಿದ್ರ ಮಾಡಲು ಹೊರಟಿದ್ದಾರೆ. ಕುಂಬೋಳ್ ತಂಜಳರವರ ಮುಂದಾಳುತನದಲ್ಲಿ ನಡೆಯುವ ಉಕ್ಕುಡ ಜಮಾಅತಗೆ ಬುದ್ಧಿ, ಹಿತವಚನ ಹೇಳಲು ಹೊರಗಿನವರ ಅಗತ್ಯವಿಲ್ಲ

  • ಜಮಾಅತರು
    ಉಕ್ಕುಡ ಜಮಾಮಸೀದಿ